ನನ್ನ ವಿರುದ್ಧ ಡಿಕೆ ಸಹೋದರರಿಬ್ಬರು ಸ್ಪರ್ಧಿಸಲಿ : ಮುನಿರತ್ನ
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್.ಆರ್ ನಗರದಲ್ಲಿ ಕುಸುಮಾರನ್ನು ಗೆಲ್ಲಿಸೋದು ಯಾಕೆ? ಬೇಕಿದ್ರೆ ನನ್ನ ವಿರುದ್ಧ ಡಿಕೆಶಿ ಹಾಗೂ ಸಂಸದ ಡಿಕೆ ಸುರೇಶ್ ಇಬ್ಬರೂ ಬಂದು ಸ್ಪರ್ಧೆ ಮಾಡಲಿ.
ಒಬ್ಬರು ಯಾಕೆ, ಇಬ್ಬರೂ ಬಂದು ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಈಗಾಗಲೇ ಈ ಹಿಂದೆ ಬಂದು ಎಷ್ಟು ಅಂತರದಿಂದ ಸೋತಿದ್ದಾರೆ ಎಂಬುದು ಗೊತ್ತಿದೆಯಲ್ಲ. ಚುನಾವಣೆ ಸಂದರ್ಭ, ಏನೇನೋ ಕದ್ದ ಅಂತಾ ವಿರುದ್ಧ ಆರೋಪ ಮಾಡುತ್ತಾರೆ.