ಮುನಿರತ್ನ ಏರ್ಪಡಿಸಿದ್ದ ಶಿವರಾತ್ರಿ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ತೀವ್ರ ಮುಜುಗರ

ಭಾನುವಾರ, 19 ಫೆಬ್ರವರಿ 2023 (14:19 IST)
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಮಲ್ಲತ್ತಹಳ್ಳಿ ಕೆರೆಯ ಬಳಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ತೀವ್ರ ಮುಜುಗರ ಉಂಟಾಗಿದೆ.72 ಎಕರೆ ಕೆರೆ ಮುಚ್ಚಿ ಮೈದಾನ‌ ಮಾಡಿ ಶಿವರಾತ್ರಿ ಕಾರ್ಯಕ್ರಮ ಏರ್ಪಡಿಸಿದ್ದ ಮುನಿರತ್ನ ಕಾರ್ಯಕ್ರಮದಲ್ಲಿ ಸಿಎಂ ಭಾಷಣ ಶುರು ಮಾಡುತ್ತಿದ್ದಂತೆ ಬ್ಯಾನರ್ ಅಳವಡಿಕೆ ಮಾಡಲಾಗಿದೆ.
 
ಕೆರೆಕಳ್ಳ ಮುನಿರತ್ನ ಎಂಬ ಬರಹ‌ವಿರುವ ಬ್ಯಾನರ್ ಅಳವಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮುಜುಗರ ಸೃಷ್ಟಿಮಾಡಿದ್ದಾರೆ.PAYCM ಬೊಮ್ಮಾಯಿ ಅರ್ಪಿಸುವ ಎಂಬ ತಲೆಬರಹವಿದ್ದ ಬ್ಯಾನರ್ ಅಳವಡಿಸಲಾಗಿತ್ತು. 
 
ಕೆರೆ ಮುಚ್ಚಿರುವ ವಿಷಯದಿಂದ ಆದ ಅವಮಾನದಿಂದಾಗಿ ಭಾಷಣ ಮಾಡಲು  ಕಂದಾಯ ಸಚಿವ ಆರ್.ಅಶೋಕ್. ನಿರಾಕರಿಸಿದಾರೆ.ಕಾಂಗ್ರೆಸ್ ಕಾರ್ಯಕರ್ತೆ ಬಿಂದು‌ ಗೌಡರನ್ನ ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ