ಶಿವರಾಜ್ ಎಸ್ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವರು.ಬೆಂಗಳೂರಿನ ಆಂಗ್ಲ ಮಾಧ್ಯಮ ಶಾಲೆಯೊಂದು ಕನ್ನಡ ಭಾಷೆ ಬೋದನೆಯಿಂದ ಹಿಂದೆ ಸರಿಯುವುದಕ್ಕೆ ಚಾಲನೆ ನೀಡಿದೆ.ಇದು ಕನ್ನಡ ಭಾಷೆಗೆ ಹಾಗೂ ಅಸ್ಮಿತೆಗೆ ಮಾಡುತ್ತಿರುವ ಅಪಮಾನವಾಗಿದೆ.ಯಾವುದೆ ವಾಸಿಸುವ ನೆಲದ ಭಾಷೆಯ ಬಗ್ಗೆ ಅವರಿಗೆ ಪ್ರಾಥಮಿಕ ತಿಳುವಳಿಕೆ ಇರಬೇಕಾದುದ್ದು ಅವಶ್ಯಕ.ಪೋಷಕರ ಮನವಿ ಹಿನ್ನೆಲೆ ಕಾನೂನು ಹೋರಾಟಕ್ಕೂ ಶಾಲಾ ಆಡಳಿತ ಮಂಡಳಿ ಸಿದ್ದವಾಗಿರುವುದು ಖಂಡನೀಯ.ದ್ವಿತೀಯ ಭಾಷೆಯಾಗಿ ಕನ್ನಡ ಕಲಿಸುವ ನಿಯಮಗಳಿಗೆ ಯಾವುದೇ ವಿನಾಯಿತಿ ನೀಡಬಾರದು.ಶಿಕ್ಷಣ ಇಲಾಖೆ ಮೇಲೆ ಒತ್ತಡ ಹೇರುತ್ತಿರುವ ಹಾಗೂ ಕಾನೂನು ಹೋರಾಟಕ್ಕೆ ಮುಂದಾಗಿರುವ ಇಂತಹ ಶಾಲೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಶಿವರಾಜ ತಂಗಡಗಿಯಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಲಾಗಿದೆ.