ವೀರಶೈವ ನಮ್ಮ ಉಪಜಾತಿ, 31 ಬೋಗಿಗಳಿರುವ ಬಸವ ಎಕ್ಸ್‌ಪ್ರೆಸ್ ರೈಲಿನಲ್ಲಿ ವೀರಶೈವರು ಒಂದು ಬೋಗಿಯಾಗಿದ್ದಾರೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವೀರಶೈವ ಇರುವವರಗೆ ಲಿಂಗಾಯುತ ಪ್ರತ್ಯೇಕ ಧರ್ಮವಾಗಲು ಸಾಧ್ಯವಾಗುವುದಿಲ್ಲ. ವೀರಶೈವದಿಂದ ಬೇರೆಯಾಗಿ ಸ್ವತಂತ್ರ ಲಿಂಗಾಯುತ ಧರ್ಮ ಸ್ಥಾಪಿಸುವುದೇ ನಮ್ಮ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಜೈನ ಸಮುದಾಯಕ್ಕೆ ಪ್ರತ್ಯೇಕ ಧರ್ಮವಾಗುವ ಅವಕಾಶ ನೀಡಲಾಗಿದೆ. ಆದರೆ, ಲಿಂಗಾಯುತವನ್ನು ಪ್ರತ್ಯೇಕ ಧರ್ಮವಾಗಿಸುವ ಬಗ್ಗೆ ಕೆಲವರು ರಾಜಕೀಯ ಕಾರಣಗಳಿಗಾಗಿ ಅಪಸ್ವರ ಎತ್ತುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬರುವ ಆಕ್ಟೋಬರ್ ಒಳಗೆ ಮಠಾಧೀಶರು ವೀರಶೈವ- ಲಿಂಗಾಯುಕ ಬಗ್ಗೆ ಸ್ಪಷ್ಟ ನಿಲುವು ತಳೆಯಲಿ. ಹಾಗಾದಲ್ಲಿ ಸಿಎಂ ಸಿದ್ದರಾಮಯ್ಯನವರ ಮೇಲೆ ಒತ್ತಡ ಹೇರಿ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ಕೋರಲಾಗುವುದು ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.