ಗಾಂಜಾ, ಅಫೀಮ್ ಬದಲಿಗೆ ಮದ್ಯಪಾನ ಮಾಡಿ: ಸಚಿವ ತಿಮ್ಮಾಪುರ್ ಸಲಹೆ
ಗುರುವಾರ, 28 ಸೆಪ್ಟಂಬರ್ 2017 (14:41 IST)
ಗಾಂಜಾ, ಅಫೀಮ್ ಸೇವನೆ ಬದಲಿಗೆ ಮದ್ಯ ಸೇವಿಸಿ ಎಂದು ಅಬಕಾರಿ ಖಾತೆ ಸಚಿವ ಆರ್.ಬಿ.ತಿಮ್ಮಾಪುರ್ ರಾಜ್ಯದ ಜನತೆಗೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಜಾ ಅಫೀಮ್ ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ. ಅದರ ಬದಲಿಗೆ ಮದ್ಯಪಾನ ಸೇವನೆ ಅತ್ಯುತ್ತಮವಾಗಿದೆ ಎಂದು ತಿಳಿಸಿದ್ದಾರೆ.
ಆದ್ರೆ ಮದ್ಯಪಾನ ಅನ್ನೋದು ಇತ್ತೀಚಿನ ಸಂಸ್ಕ್ರತಿಯಲ್ಲ. ದೇವಾನುದೇವತೆಗಳೇ ಮದ್ಯ ಸೇವಿಸಿದ್ದಾರೆ ಆದ್ದರಿಂದ ಮದ್ಯಪಾನ ಮಾಡುವುದು ಒಳ್ಳೆಯದು. ಡ್ರಗ್ ಅಡಿಕ್ಟ್‌ಗಳನ್ನು ಗುರುತಿಸಿ ಮಾಹಿತಿ ನೀಡುವಂತೆ ಕಾಲೇಜು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅಬಕಾರಿ ಖಾತೆ ಎಂದರೆ ಸರಕಾರದ ಬೊಕ್ಕಸವನ್ನು ತುಂಬುವುದು. ಅಬಕಾರಿ ಖಾತೆಯಿಂದಲೇ ಸರಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ ಎಂದು ಅಬಕಾರಿ ಖಾತೆ ಸಚಿವ ಆರ್.ಬಿ.ತಿಮ್ಮಾಪುರ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.