ED Raid: ಸಚಿವ ಪರಮೇಶ್ವರ್ ಸಿದ್ಧಾರ್ಥ್ ಕಾಲೇಜು ಇಡಿ ದಾಳಿಗೂ ರನ್ಯಾ ರಾವ್ ಗೂ ಲಿಂಕ್

Krishnaveni K

ಬುಧವಾರ, 21 ಮೇ 2025 (12:09 IST)
ತುಮಕೂರು: ಗೃಹಸಚಿವ ಡಾ ಜಿ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಂದು ಬೆಳ್ಳಂ ಬೆಳಿಗ್ಗೆಯೇ ಇಡಿ ದಾಳಿ ನಡೆಸಿದೆ. ಈ ದಾಳಿಗೂ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಬಂಧಿತಳಾಗಿರುವ ನಟಿ ರನ್ಯಾ ರಾವ್ ಗೂ ಸಂಬಂಧವಿದೆ ಎನ್ನಲಾಗುತ್ತಿದೆ.

ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಣಿಕೆ ಮಾಡುತ್ತಿದ್ದ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧಿತಳಾಗಿದ್ದಳು. ಆಕೆಗೆ ಈಗ ಒಂದು ಪ್ರಕರಣದಲ್ಲಷ್ಟೇ ಜಾಮೀನು ಸಿಕ್ಕಿದ್ದು, ಉಳಿದಂತೆ ನ್ಯಾಯಾಂಗ ಬಂಧನ ಮುಂದುವರಿದಿದೆ.

ನಟಿಯ ವಿಚಾರಣೆ ಮಾಡುವಾಗ ಆಕೆಗಿದ್ದ ಲಿಂಕ್ ಬಗ್ಗೆ ಸಾಕಷ್ಟು ವಿಚಾರಗಳು ಬಯಲಾಗಿದ್ದವು. ಮೂಲಗಳ ಪ್ರಕಾರ ರನ್ಯಾ ರಾವ್ ಮತ್ತು ಸಿದ್ಧಾರ್ಥ ಶಿಕ್ಷಣ ಸಂಸ್ಥೆ ನಡುವೆಯೂ ಹಣಕಾಸಿನ ವ್ಯವಹಾರವಾಗಿತ್ತು ಎಂಬ ಶಂಕೆಯಿದೆ.

ಇದೇ ಕಾರಣಕ್ಕೇ ಈಗ ಇಡಿ ದಾಳಿ ನಡೆಸಿದೆಯೇ ಎಂದು ಅನುಮಾನಿಸಲಾಗಿದೆ. ರನ್ಯಾ ರಾವ್ ಪ್ರಕರಣ ಹೊರಬಂದಾಗ ಆಕೆಗೆ ಪ್ರಭಾವಿಗಳ ಬೆಂಬಲವಿದೆ ಎಂದು ಹೇಳಲಾಗಿತ್ತು. ಇದಕ್ಕೆ ತಕ್ಕಂತೆ ಆಕೆಯ ಮದುವೆಯಲ್ಲಿ ಪ್ರಭಾವಿಗಳು ಭಾಗಿಯಾಗಿದ್ದ ಫೋಟೋಗಳೂ ವೈರಲ್ ಆಗಿದ್ದವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ