ಹೈವೇಯಲ್ಲಿ ಕುರಿಹಿಂಡುಗಳಂತೆ ಓಡಾಡಿದ ಸಿಂಹಗಳು

ಭಾನುವಾರ, 16 ಏಪ್ರಿಲ್ 2017 (15:27 IST)
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಂಹಗಳ ತಂಡ ಓಡಾಡುತ್ತಿರುವುದನ್ನು ನೋಡಿದ ವಾಹನಗಳ ಸವಾರರು ದಂಗಾಗಿದ್ದಾರೆ.
 
ಸುಮಾರು 12ಕ್ಕೂ ಹೆಚ್ಚು ಸಿಂಹಗಳು ಹೆದ್ದಾರಿಯ ಮೇಲೆ ಕೆಲ ಕಾಲ ನಡೆದಾಡಿ ಅಚ್ಚರಿ ಮೂಡಿಸಿವೆ. ಹೆದ್ದಾರಿಯಲ್ಲಿ ಸಾಗುತ್ತಿದ್ದ ಕೆಲ ಯುವಕರು ಸಿಂಹಗಳ ಓಡಾಟವನ್ನು ವಿಡಿಯೋ ಮಾಡಿಕೊಂಡಿದ್ದು, ಇದೀಗ ವಿಡಿಯೋ ವೈರಲ್‌ ಆಗಿದೆ.
 
ಸಿಂಹಗಳು ಓಡಾಡುತ್ತಿರುವುದು ಗಮನಕ್ಕೆ ಬಂದ ಕೂಡಲೇ ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರ ಮೇಲೆ ಸಿಂಹಗಳು ಎರಗಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಇಂತಹ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ