ತನಗಾಗಿ ಇಟ್ಟುಕೊಂಡಿದ್ದ ಮದ್ಯ ಕುಡಿದಿದ್ದಕ್ಕೆ ಪತ್ನಿಯ ಕೊಲೆ

ಗುರುವಾರ, 3 ನವೆಂಬರ್ 2016 (16:21 IST)
ತನಗಾಗಿ ಇಟ್ಟುಕೊಂಡಿದ್ದ ಮದ್ಯವನ್ನು ಪತ್ನಿ ಕುಡಿದಿದ್ದರಿಂದ ಆಕ್ರೋಶಗೊಂಡ ಪತಿ ಆಕೆಯ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. 
 
ಕೊಡಗು ಜಿಲ್ಲೆಯ ವಿರಾಜಪೇಟೆ ಚಾಲೂಕಿನ ಹೊಸೂರುಬೆಟ್ಟಗೇರಿ ಗ್ರಾಮದಲ್ಲಿ ಆರೋಪಿ ಪತಿ ಚೆನ್ನಪ್ಪ, ಪತ್ನಿ ಸೋನಿಯನ್ನು ಕತ್ತುಹಿಸುಕಿ ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪ್ರತಿನಿತ್ಯ ಮದ್ಯ ಸೇವಿಸುತ್ತಿದ್ದ ಆರೋಪಿ ಚೆನ್ನಪ್ಪ, ನಿನ್ನೆ ರಾತ್ರಿ ಮದ್ಯದ ಬಾಟಲಿ ಕಾಣದಾದಾಗ ಪತ್ನಿಯನ್ನು ವಿಚಾರಿಸಿದ್ದಾನೆ. ಪತ್ನಿ ತಾನೇ ಮದ್ಯವನ್ನು ಕುಡಿದಿದ್ದಾಗಿ ಹೇಳಿದ್ದಾಳೆ. ಇದರಿಂದ ಆಕ್ರೋಶಗೊಂಡು ಚೆನ್ನಪ್ಪ ಆಕೆಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಸಿದ್ದಾಪುರ ಪೊಲೀಸ್ ಠಾಣೆಯ ಪೊಲೀಸರು ಆರೋಪಿ ಚೆನ್ನಪ್ಪನ ವಿರುದ್ಧ ಹತ್ಯಾಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ