ಬಿಜೆಪಿ ತನ್ನ ಹುರಿಯಾಳುಗಳನ್ನು ಪ್ರಕಟಿಸಿದ ಬೆನ್ನಲ್ಲೇ ಮೈಕೊಡವಿ ಎದ್ದಿರುವ ಕಾಂಗ್ರೆಸ್ ಲೋಕಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳನ್ನು ಇಂದು ಸಂಜೆ ಘೋಷಣೆ ಮಾಡಲಿದೆ.
ಕಾಂಗ್ರೆಸ್ ಮುಖಂಡರು ನಿನ್ನೆ ನಡೆಸಿದ ಸಭೆಯಲ್ಲಿ ಜಾತಿ ಲೆಕ್ಕಾಚಾರದ್ದೇ ಸದ್ದು ಜೋರಾಗಿತ್ತಂತೆ. ಲಿಂಗಾಯತ, ಕುರುಬ, ಅಲ್ಪಸಂಖ್ಯಾತರ ವಿಚಾರದಲ್ಲಿ ಜಾತಿ ಲೆಕ್ಕಾಚಾರ ಗಣನೆಗೆ ತೆಗೆದುಕೊಂಡು ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗಿದೆ.
ರಾಜ್ಯದಲ್ಲಿ ಮೈತ್ರಿ ಪಕ್ಷಗಳ ಧರ್ಮದ ಪ್ರಕಾರ ಇರುವ 20 ಕ್ಷೇತ್ರಗಳಲ್ಲಿ ಎರಡು ಎಸ್ ಟಿ, ಮೂರು ಎಸ್ಸಿ, ಎರಡು ಕುರುಬ, ಎರಡು ಮುಸ್ಲಿಂ, ಎರಡು ಒಕ್ಕಲಿಗ, ಆರು ಲಿಂಗಾಯತ, ಎರಡು ಹಿಂದುಳಿದ ಜಾತಿಗೆ ಟಿಕೆಟ್ ಕೊಡಬೇಕು ಎಂಬುದರ ಕುರಿತು ಸ್ಕ್ರೀನಿಂಗ್ ಕಮಿಟಿಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಪಟ್ಟಿ ಬಿಡುಗಡೆ ಬೆನ್ನಲ್ಲೇ ರಾಜ್ಯ ಕೈ ನಾಯಕರು ಬಿಜೆಪಿ ಅಭ್ಯರ್ಥಿ ವಿರುದ್ಧ ಅಳೆದು ತೋಗಿ ಅಭ್ಯರ್ಥಿ ಹಾಕಲು ಹರಸಹಾಸ ಮುಂದುವರಿಸಿದ್ದಾರೆ. ಅಭ್ಯರ್ಥಿಗಳ ಸಾಮರ್ಥ್ಯದ ಬಗ್ಗೆ ನಾಯಕರಲ್ಲಿ ದೊಡ್ಡ ಚಿಂತೆ ಹಾಗೂ ಪ್ರಶ್ನೆಗಳು ಇವೆ.
ಬೆಳಗಾವಿಯಲ್ಲಿ
ಶಿಶಿಕಾಂತ ಸಿದ್ನಳ್, ಸಾದನ್ನನವರ್
ಧಾರವಾಡ - ವಿನಯ್ ಕುಲಕರ್ಣಿ
ಚಿಕ್ಕೋಡಿ - ಪ್ರಕಾಶ್ ಹುಕ್ಕೇರಿ
ಬೀದರ್ - ಈಶ್ವರ್ ಖಂಡ್ರೆ
ಹಾವೇರಿ - ಡಿ.ಆರ್. ಪಾಟೀಲ್
ಬಾಗಲಕೋಟೆ - ವೀಣಾ ಕಾಶಪ್ಪನವರ್
ದಾವಣಗೆರೆ – ಎಸ್. ಎಸ್. ಮಲ್ಲಿಕಾರ್ಜುನ
ದಕ್ಷಿಣ ಕನ್ನಡ - ರಮನಾಥ್ ರೈ - ಐವನ್ ಡಿಸೋಜ
ಚಿಕ್ಕಬಳ್ಳಾಪುರ - ವೀರಪ್ಪ ಮೊಯಿಲಿ
ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್
ಬೆಂಗಳೂರು ದಕ್ಷಿಣ - ಗೋವಿಂದ ರಾಜು
ಬೆಂಗಳೂರು ಕೇಂದ್ರ - ರಿಜ್ವಾನ್ ಅರ್ಷದ್/ ಬಿ.ಕೆ. ಹರಿಪ್ರಸಾದ್