‘ಮದರ್ಶಿಪ್’ ಮೇಲೆ ಪುಟಾಣಿ ಹಕ್ಕಿಗಳ ಸವಾರಿ
ಅಮ್ಮ ಎಂದರೆ ದೇವತೆ... ಅದು ಮನುಷ್ಯರಾಗಲಿ ಇತರ ಜೀವರಾಶಿಗಳೇ ಆಗಲಿ. ಅಮ್ಮನ ಪ್ರೀತಿಯಲ್ಲಿ ಯಾವುದೇ ವ್ಯತ್ಯಾಸ ಇರದು. ಇದು ನೀರಿನಲ್ಲಿ ತಾಯಿಯೊಬ್ಬಳು ತನ್ನ ಮರಿಗಳನ್ನು ಬೆನ್ನ ಮೇಲೆ ಕುಳ್ಳಿರಿಸಿ ಈಜುತ್ತಾ ಸಾಗುವ ದೃಶ್ಯ. ಈ ಕ್ಷಣವೇ ಸುಂದರ. ಈ ಪುಟಾಣಿಗಳೂ ಅಮ್ಮನ ಬೆನ್ನೇರಿ ತಮ್ಮ ಪ್ರಯಾಣದ ಖುಷಿಯನ್ನು ಆನಂದಿಸುತ್ತಿರುವುದು ಕೂಡಾ ಇಲ್ಲಿ ಕಾಣಿಸುತ್ತದೆ.ಹಕ್ಕಿಯೊಂದು ತನ್ನ ಮರಿಗಳೊಂದಿಗೆ ಈಜುತ್ತಾ ಸಾಗುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಸಾಗುವಾಗ ಕೆಲ ಪುಟಾಣಿಗಳು ಅಮ್ಮನ್ನು ಹಿಂಬಾಲಿಸುತ್ತಿದ್ದರೆ, ಇನ್ನೊಂದಷ್ಟು ಪುಟ್ಟ ಹಕ್ಕಿಗಳು ತಾಯಿಯ ಬೆನ್ನೇರಿ ಕುಳಿತು ಆ ಕ್ಷಣವನ್ನು ಎಂಜಾಯ್ ಮಾಡುತ್ತಿದ್ದವು. ಈ ಕ್ಷಣವೇ ಸುಂದರ.ಸಹಜವಾಗಿಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಜತೆಗೆ, ಇಂತಹದ್ದೇ ತಾಯಿ ಮಮತೆಯ ಇನ್ನೊಂದಷ್ಟು ಅಪೂರ್ವ ದೃಶ್ಯಗಳನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.