ಹುತಾತ್ಮ ಯೋಧ ಗುರು ಅಂತ್ಯ ಸಂಸ್ಕಾರದ ಸ್ಥಳ ಬದಲಾಗಿದೆ. ಮಂಡ್ಯದ ಮದ್ದೂರು ಮಳವಳ್ಳಿ ರಸ್ತೆ ಪಕ್ಕದ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆದಿದೆ.
ಈ ಹಿಂದೆ ಗ್ರಾಮದ ಹೊರವಲಯದ ಬಳಿಯ ಸರ್ಕಾರಿ ಜಾಗದಲ್ಲಿ ಅಂತ್ಯ ಸಂಸ್ಕಾರಕ್ಕೆ ಜಾಗ ಗುರ್ತಿಸಲಾಗಿತ್ತು. ಈ ಜಾಗದ ಬಗ್ಗೆ ಕುಟುಂಬಸ್ಥರು ಮತ್ತು ಮತ್ತು ಗುರು ಸ್ನೇಹಿತರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಜಾಗದಲ್ಲಿ ಅಂತ್ಯ ಸಂಸ್ಕಾರ ಬೇಡ ವೆಂದು ಪಟ್ಟು ಹಿಡಿದಿದ್ದರು. ಈ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಿದರೆ ಗುರುವಿನ ಬಲಿದಾನ ವ್ಯರ್ಥವಾಗುತ್ತೆ ಎಂದಿದ್ದರು.
ವಿರೋಧದ ಕಾರಣದಿಂದ ಅಂತ್ಯ ಸಂಸ್ಕಾರದ ಜಾಗವನ್ನು ಜಿಲ್ಲಾಡಳಿತ ಬದಲಿಸಿದೆ. ಮದ್ದೂರು ಮಳವಳ್ಳಿ ರಸ್ತೆ ಪಕ್ಕದ ಜಾಗದಲ್ಲಿ ಮೃತ ಯೋಧನ ಅಂತ್ಯ ಸಂಸ್ಕಾರಕ್ಕೆ ಅಂತಿಮ ಸ್ಥಳ ನಿಗದಿ ಪಡಿಸಿದೆ. ಮೃತ ಯೋಧನ ಅಂತಿಮ ಸಂಸ್ಕಾರಕ್ಕೆ 35 ಗುಂಟೆ ಸರ್ಕಾರಿ ಜಾಗವನ್ನು ಜಿಲ್ಲಾಡಳಿತ ನೀಡಿದೆ.
ಅಂತ್ಯ ಸಂಸ್ಕಾರಕ್ಕೆ ನಿಗದಿಗೊಳಿದ ಜಾಗವನ್ನು ಜೆಸಿಬಿ ಯಂತ್ರದ ಮೂಲಕ ಸಮತಟ್ಟುಗೊಳಿಸುವ ಸಿದ್ದತೆ ನಡೆದಿದೆ. ಹಿಂದೂ ಪದ್ದತಿಯಂತೆ ಗುರು ವಿನ ಅಂತಿಮ ಸಂಸ್ಕಾರ ನಡೆಯಲಿದೆ.