ಎಟಿಎಂನಲ್ಲಿ ಹಣವಿಲ್ಲ, ದಿನಸಿ ಅಂಗಡಿಯಲ್ಲಿ ಸಾಮಾನೇ ಇಲ್ಲ!
ಇನ್ನು, ಎಟಿಎಂಗಳಲ್ಲೂ ಕಾಲ ಕಾಲಕ್ಕೆ ಹಣ ತುಂಬುವ ಕೆಲಸವಾಗುತ್ತಿಲ್ಲ. ಹೀಗಾಗಿ ಬೆಂಗಳೂರಿನಂತಹ ನಗರ ಪ್ರದೇಶದ ಕೆಲವು ಎಟಿಎಂಗಳಲ್ಲೇ ಹಣ ಖಾಲಿಯಾಗಿದೆ. ಇದರಿಂದಾಗಿ ದುಡ್ಡೂ ಇಲ್ಲ, ದಿನಸಿಯೂ ಇಲ್ಲ ಎಂದು ಜನರು ಪರದಾಡುವಂತಾಗಿದೆ. ಜತೆಗೆ ಕೊರೋನಾ ಭಯದಿಂದಾಗಿ ಖಾಸಗಿ ವೈದ್ಯರು ತಮ್ಮ ಕ್ಲಿನಿಕ್ ಗಳನ್ನೂ ತೆರೆಯುತ್ತಿಲ್ಲ. ಕೆಲವು ಆಸ್ಪತ್ರೆಗಳು ಈಗ ಬರೋದೇ ಬೇಡ ಎಂದು ಬೋರ್ಡ್ ಹಾಕಿ ಕುಳಿತಿದ್ದಾರೆ. ಇದರಿಂದಾಗಿ ಕೊರೋನಾ ಹೊರತಾದ ಇತರ ರೋಗಿಗಳ ಪಾಡು ಕೇಳುವವರಿಲ್ಲದಾಗಿದೆ. ಹೀಗಾಗಿಯೇ ಜನರಿಗೆ ಲಾಕ್ ಡೌನ್ ಈಗೀಗ ಉಸಿರುಗಟ್ಟಿಸುವಂತೆ ಮಾಡುತ್ತಿದೆ. ಆದರೂ ಜೀವ ಉಳಿಸಿಕೊಳ್ಳಲು ಮನೆಯಲ್ಲೇ ಕೂರುವ ಪರಿಸ್ಥಿತಿ ಎದುರಾಗಿದೆ.