ರಂಜಾನ್ ತಿಂಗಳಲ್ಲೂ ಲಾಕ್ ಡೌನ್ : ಮುಸ್ಲಿಂ ಮುಖಂಡರು ಹೇಳಿದ್ದೇನು?
ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್ ಡೌನ್ ಮುಂದುವರಿಸಲಾಗಿದೆ. ಏತನ್ಮಧ್ಯೆ ರಂಜಾನ್ ಆಚರಣೆ ಬಂದಿದ್ದು ಈ ಕುರಿತು ಮುಸ್ಲಿಂ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.
ಮಸೀದಿಗೆ ತೆರಳದೆ ಮನೆಯಲ್ಲೇ ನಮಾಜ್ ಮಾಡಬೇಕು. ಸಹರಿ ಹಾಗೂ ಇಫ್ತಾರ್ ಕೂಟವನ್ನ ನಿರ್ಬಂಧಿಸಬೇಕು. ಈ ಮಾಸದಲ್ಲಿ ಬಡವರಿಗೆ ಸಹಾಯ ಮಾಡಬೇಕು. ದಿನನಿತ್ಯದ ಅಗತ್ಯ ವಸ್ತುಗಳಿಗೆ ಖರೀದಿ ವಿಚಾರದಲ್ಲಿ ಸರಕಾರ ನೀಡುವ ನಿರ್ದೇಶನ ತಪ್ಪದೇ ಪಾಲಿಸಬೇಕು. ಸಮುದಾಯದ ಮುಖಂಡರು ಸರಕಾರದ ಸೂಚನೆಯನ್ನ ಕಡ್ಡಾಯವಾಗಿ ಪಾಲಿಸಿ ಕೊರೊನಾ ನಿಯಂತ್ರಣಕ್ಕೆ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.