ಲಾಕ್ ಡೌನ್ ನಲ್ಲಿ ಸುಮ್ ಸುಮ್ಮನೆ ಓಡಾಡಿದ್ರೆ ಸ್ಥಳದಲ್ಲೇ ಲೈಸೆನ್ಸ್ ರದ್ದು
ಬುಧವಾರ, 25 ಮಾರ್ಚ್ 2020 (15:39 IST)
ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ಅಗತ್ಯ ಕಾರಣಗಳಿಲ್ಲದೇ ಅನವಶ್ಯಕವಾಗಿ ಓಡಾಡುವ ವಾಹನ ಸವಾರರ ಲೈಸೆನ್ಸ್ ರದ್ದುಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.
ಲೈಸನ್ಸ್ ಹಾಗೂ ಹಾಗೂ ವಾಹನದ ನೋಂದಣಿಯನ್ನು ರದ್ದು ಮಾಡಲಾಗುವುದು ಎಂದು ಉತ್ತರಕನ್ನಡ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಕೆ. ಎಚ್ಚರಿಕೆ ನೀಡಿದ್ದಾರೆ.
ಕೊವಿಡ್ 19 ವೈರಾಣು ಹರಡದಂತೆ ಈಗಾಗಲೇ ಇಡೀ ದೇಶಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ. ಅದರಂತೆ ಜಿಲ್ಲೆಯಲ್ಲೂ ನಿಷೇಧಾಜ್ಞೆ ಜಾರಿ ಮಾಡಿ, ನಿರ್ಬಂಧಗಳನ್ನು ಹೇರಲಾಗಿದೆ. ಆದರೆ ಈ ಎಲ್ಲಾ ನಿರ್ಬಂಧಗಳ ನಡುವೆಯೂ ಕೆಲವರು ಯಾವುದೇ ಕಾರಣಗಳಿಲ್ಲದೇ ಅನಾವಶ್ಯಕವಾಗಿ ವಾಹನಗಳಲ್ಲಿ ಓಡಾಡುವುದನ್ನು ಮುಂದುವರೆಸಿದ್ದಾರೆ.
ಆದರೆ ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ, ಅನಗತ್ಯವಾಗಿ ಓಡಾಡುವ ವಾಹನ ಸವಾರರ ಲೈಸೆನ್ಸ್ ಮಾತ್ರವಲ್ಲ ಅವರ ವಾಹನದ ನೋಂದಣಿಯನ್ನು ಸ್ಥಳದಲ್ಲಿಯೇ ರದ್ದು ಮಾಡಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.