ನಿಮ್ಮ ಮನೆ ಮನೆ ಬರುತ್ತವೆ ಅಗತ್ಯ ವಸ್ತುಗಳು - ಲಾಕ್ ಡೌನ್ ಚಿಂತೆಬಿಡಿ

ಬುಧವಾರ, 25 ಮಾರ್ಚ್ 2020 (15:31 IST)
ಆರೋಗ್ಯದ ಹಿತದೃಷ್ಟಿಯಿಂದ ಕೇಂದ್ರ ಸರಕಾರ ಲಾಕ್‌ ಡೌನ್ ಘೋಷಿಸಿದೆ. ಆದರೆ ಮುಂದೇನಪ್ಪಾ ಅಂತ ಯೋಚಿಸುವವರ ನೆರವಿಗೆ ಜಿಲ್ಲಾಡಳಿತ ಬರುತ್ತಿದೆ.

ಜನರು ಸ್ವಯಂಪ್ರೇರಿತರಾಗಿ ತಮ್ಮ ರಕ್ಷಣೆಯ ಜೊತೆ ಇನ್ನೊಬ್ಬರ ಆರೋಗ್ಯದ ರಕ್ಷಣೆಗಾಗಿ 21 ದಿನಗಳವರೆಗೆ ಕಡ್ಡಾಯವಾಗಿ ಮನೆಯಲ್ಲಿರಬೇಕು ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಕೆ ಹರೀಶಕುಮಾರ ಹೇಳಿದ್ದಾರೆ.

ಆರೋಗ್ಯವಂತ ವ್ಯಕ್ತಿ ಮತ್ತು ಮನೆಯಲ್ಲಿ ಇರುವವರಿಗೆ ಯಾವುದೇ ಮಾಸ್ಕ್ ಗಳ ಅವಶ್ಯಕತೆ ಇಲ್ಲಾ. ಶುಚಿತ್ವಕ್ಕೆ ಒತ್ತು ನೀಡಿದರೆ ಸಾಕು. ಅಕ್ಕ ಪಕ್ಕದ ಮನೆಗಳಿಗೆ ಹೊರಗಡೆಯಿಂದ ಬಂದವರನ್ನು ಕೀಳಾಗಿ ಕಾಣದೆ 14 ದಿನಗಳವರೆಗೆ ನಿಗಾದಲ್ಲಿ ಇರುವಂತೆ ತಿಳುವಳಿಕೆ ನೀಡಿರಿ.  

ಜಿಲ್ಲೆಯಲ್ಲಿ ಜೀವನಾವಶ್ಯಕ ಸಾಮಗ್ರಿಗಳ ಸಂಗ್ರಹವಿದ್ದು, ಅಗತ್ಯ ಬಿದ್ದಲ್ಲಿ ಮನೆ ಮನೆಗೆ ಪೂರೈಸುವ ವ್ಯವಸ್ಥೆಯನ್ನು ಕೂಡಾ ಜಿಲ್ಲಾಡಳಿತ ಮಾಡಲು ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ