ಲಾಕ್ ಡೌನ್ ವಿಸ್ತರಣೆ ವಿಚಾರ; ಕೇಂದ್ರಕ್ಕೆ ವರದಿ ಸಲ್ಲಿಸಲಿರುವ ರಾಜ್ಯ ಸರ್ಕಾರ!
ಬುಧವಾರ, 8 ಏಪ್ರಿಲ್ 2020 (11:45 IST)
ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ ಈಗಾಗಲೇ ಲಾಕ್ ಡೌನ್ ಅನ್ನು ದೇಶಾದ್ಯಂತ ಜಾರಿಗೊಳಿಸಲಾಗಿದೆ. ಏಪ್ರಿಲ್ 14ರ ವರೆಗೆ ಈ ಲಾಕ್ ಡೌನ್ ಅನ್ನು ಜಾರಿಗೊಳಿಸಲಾಗಿದೆ. ಏಪ್ರಿಲ್ 14ರ ಬಳಿಕವೂ ಈ ಲಾಕ್ ಡೌನ್ ವಿಸ್ತರಣೆ ವಿಚಾರ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳು ವರದಿ ಸಲ್ಲಿಸಲಿವೆ.
ಲಾಖ್ ಡೌನ್ ವಿಸ್ತರಿಸಬೇಕೇ ಬೇಡವೇ ಎಂಬ ವರದಿಯನ್ನು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿವೆ.ಏಪ್ರಿಲ್ 10ರವರೆಗಿನ ಕೊರೊನಾ ಸೋಂಕಿನ ಅಂಕಿ-ಅಂಶಗಳ ಅಧ್ಯಯನದ ನಡೆಸಿ ನಂತರ ಈ ಕುರಿತು ತೀರ್ಮಾನಿಸಿ ವರದಿಯನ್ನು ಸಲ್ಲಿಸಲಿವೆ.