ಲಾಕ್ ಡೌನ್ ನಲ್ಲಿ ಏನೇನಿರುತ್ತೆ? ಏನೇನಿರಲ್ಲ? ಮಾರ್ಗಸೂಚಿ ಇಲ್ಲಿದೆ

ಮಂಗಳವಾರ, 27 ಏಪ್ರಿಲ್ 2021 (09:52 IST)
ಬೆಂಗಳೂರು: ಕೊರೋನಾ ಅಲೆ ತಪ್ಪಿಸಲು ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಈ ವೇಳೆ ಏನೇನಿರುತ್ತದೆ, ಏನೇನಿರಲ್ಲ ಎಂಬ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.


ಏನೇನಿದೆ?
ತುರ್ತು ಆಹಾರಗಳು, ಹಾಲು, ಮಾಂಸ, ಮೀನು ಮಳಿಗೆಗಳು ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ತೆರೆದಿರಲಿವೆ. ಆನ್ ಲೈನ್ ಕ್ಲಾಸ್ ನಡೆಸಬಹುದು. ಹೋಟೆಲ್ ರೆಸ್ಟೋರೆಂಟ್, ಮದ್ಯದಂಗಡಿಗಳಲ್ಲಿ ಪಾರ್ಸಲ್ ಗೆ ಅವಕಾಶ. ವಿಮಾನ, ರೈಲ್ವೇ ಸೇವೆ ಇರಲಿದೆ. ಸರ್ಕಾರಿ ಕಚೇರಿಗಳಲ್ಲಿ ಶೇ.50 ಸಿಬ್ಬಂದಿಗೆ ಅವಕಾಶ. ಆಸ್ಪತ್ರೆ, ಮೆಡಿಕಲ್ ತೆರೆದಿರುತ್ತವೆ. ಕೃಷಿ, ಕಟ್ಟಡ ಕಾಮಗಾರಿ ನಡೆಸಬಹುದು. ಬ್ಯಾಂಕ್ ಎಟಿಎಂ ತೆರೆದಿರಲಿವೆ. ಸರಕು ಸಾಗಣೆ, ಹೋಂ ಡೆಲಿವರಿ ವ್ಯವಸ್ಥೆ ಲಭ್ಯ. ಗಾರ್ಮೆಂಟ್ ಹೊರತುಪಡಿಸಿ ಉಳಿದೆಲ್ಲಾ ಕೈಗಾರಿಕೆಗಳಿಗೆ ಅವಕಾಶ. ಅಸ್ವಸ್ಥರು, ಅವರ ಪೋಷಕರಿಗೆ ಸಂಚರಿಸಲು ಅವಕಾಶವಿದೆ.

ಏನೇನಿರಲ್ಲ?
ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಸಾರಿಗೆ ಬಸ್, ನಮ್ಮ ಮೆಟ್ರೋ ಸಂಚಾರವಿಲ್ಲ. ಟ್ಯಾಕ್ಸಿ, ಆಟೋ, ಕ್ಯಾಬ್ ಸೇವೆ ಇಲ್ಲ.  ಶಾಲಾ-ಕಾಲೇಜುಗಳು ಬಂದ್. ಸಿನಿಮಾ ಥಿಯೇಟರ್, ಜಿಮ್, ಮಾಲ್, ಈಜುಕೊಳ, ಕ್ಲಬ್, ರಂಗಮಂದಿರ, ಸಂಭಾಗಣ, ಸಮಾರಂಭಗಳು ಬಂದ್. ಅಂತರ್ ರಾಜ್ಯ, ಜಿಲ್ಲಾ ಪ್ರಯಾಣಕ್ಕೆ ಅನುಮತಿಯಿಲ್ಲ. ಧಾರ್ಮಿಕ ಕೇಂದ್ರಗಳಲ್ಲಿ ನಿತ್ಯ ಪೂಜೆಗೆ ಮಾತ್ರ ಅವಕಾಶ. ಬಟ್ಟೆ, ಜ್ಯುವೆಲ್ಲರಿ, ಇಲೆಕ್ಟ್ರಿಕ್ ಮಳಿಗೆಗಳನ್ನು ತೆರೆಯುವಂತಿಲ್ಲ. ಮದುವೆಗೆ 50 ಮಂದಿ, ಅಂತ್ಯಕ್ರಿಯೆಗೆ 5 ಮಂದಿಗೆ ಅವಕಾಶ. ತುರ್ತು ಅಗತ್ಯಿವಲ್ಲದ ಐಟಿ-ಬಿಟಿ ಸಿಬ್ಬಂದಿಗಳಿಗೂ ಸಂಚಾರಕ್ಕೆ ಅವಕಾಶವಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ