ಬೆಂಗಳೂರಿನ 10 ಕಡೆ ಲೋಕಾಯುಕ್ತ ದಾಳಿ

ಬುಧವಾರ, 28 ಜೂನ್ 2023 (14:00 IST)
ಕೆ.ಆರ್ ಪುರಂ ತಾಹಶಿಲ್ದಾರ್ ಮನೆ ಮೇಲೆ ಬೆಳ್ಳಂಬೆಳ್ಳಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಅಜಿತ್ ರೈ ಕೆ.ಆರ್ ಪುರಂ ತಾಹಶಿಲ್ದಾರ್ ಆಗಿದ್ದು,ಅಕ್ರಮ ಆಸ್ತಿಗಳಿಕೆಯ ಆರೋಪದ ಮೇಲೆ ದಾಳಿ ಮಾಡಲಾಗಿದೆ.ಬೆಂಗಳೂರಿನ ಒಟ್ಟು 10 ಕಡೆಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ.ಕೆ.ಆರ್ ಪುರಂ ನಲ್ಲಿರು ಮನೆ ಸೇರಿದಂತೆ ನಗರದ ಹತ್ತು ಕಡೆ ಅಜಿತ್ ರವರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.20 ಕ್ಕು ಹೆಚ್ಚು ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲಾಗಿದೆ.
 
ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣ ಸಂಬಂಧ ಕೆ ಆರ್ ಪುರಂ ತಹಶಿಲ್ದಾರ ಅಜಿತ್ ರೈ ಇದ್ದ ವೇಳೆ ಸಾಕಷ್ಟು ಅಕ್ರಮ ಆಸ್ತಿ ಗಲಿಸಿರುವ ಆರೋಪ ಇದೆ.ಕೆ ಆರ್ ಪುರಂ ನಲ್ಲಿ ರಿಯಲ್ ಎಸ್ಟೇಟ್ ಹೆಚ್ಚಾಗಿ ನಡೆಯುತ್ತಿದ್ದ ವೇಳೆ ತಹಶಿಲ್ದಾರ್ ಅಗಿದ್ದ ಅಜಿತ್ ರೈ.ಈ ವೇಳೆ ಬಿಲ್ಡರ್ ಗಳಿಂದ ಅಕ್ರಮ ಹಣ ಪಡೆದಿರುವ ಆರೋಪ ಕೇಳಿಬಂದಿದೆ.ರಾಜಕಾಲುವೆ ಒತ್ತುವರಿ ಸಮಯದಲ್ಲಿ‌ ಬಿಲ್ಡರ್ ಗಳ ಆಸ್ತಿ‌ ಬಿಟ್ಟು ಬೇರೆ ಕಡೆ ತೆರುವು ಆರೋಪವು ಕೇಳಿಬಂದಿದೆ.ಆದಾಯಕ್ಕೂ ಮೀರಿ ಅಜಿತ್ ರೈ ಆಸ್ತಿ ಮಾಡಿದ್ದಾರೆ.ಕೆ ಆರ್ ಪುರಂ ತಹಶಿಲ್ದಾರ್ ಆಗಿದ್ದ ವೇಳೆ ಬೆಂಗಳೂರಿನಲ್ಲಿ ಐಷಾರಾಮಿ ‌ಮನೆ ಖರೀದಿ ಮಾಡಿದ್ದು,ಐಷಾರಾಮಿ ಕಾರ್ ಗಳನ್ನು ಅಜಿತ್ ರೈ ಹೊಂದಿದ್ದಾರೆ.ರಾಜ್ಯಾದ್ಯಂತ ಆಸ್ತಿ ಪಾಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.ಕಳೆದ ಕೆಲ ದಿನಗಳಿಂದ ಕೆ ಆರ್ ಪುರಂ ನಿಂದ ವರ್ಗಾವಣೆಗೊಂಡಿದ್ದ ಅಜಿತ್ ರೈ.ಸದ್ಯ ವರ್ಗಾವಣೆ ನಂತರ ಸರ್ಕಾರ ಎಲ್ಲಿಯೂ ಸ್ಥಳ ತೋರಿಸಿಲ್ಲ.
 
ಐಷಾರಾಮಿ ಕಾರುಗಳನ್ನ ಹೊಂದಿದ್ದಾರೆ ತಹಶಿಲ್ದಾರ್ ಅಜಿತ್ ರೈ ಹೊಂದಿದ್ದು,ಒಂದು ಫಾರ್ಚುನರ್ ,ಒಂದು ಥಾರ್ ಜೀಪ್ ,ಒಂದು ಇನ್ನೋವಾ ,ಒಂದು ಕಿಯಾ ಕಾರ್.ಒಟ್ಟು ಐದು ಕಾರ್ ಗಳು  ಅಜಿತ್ ರೈ ಹೊಂದಿದ್ದಾರೆ.ಲಕ್ಷಾಂತರ ಮೌಲ್ಯದ ಕಾರ್ ಗಳು  ಮನೆಯಲ್ಲಿ  ಅಜಿತ್ ರೈ ನಿಲ್ಲಿಸಿಕೊಂಡಿದ್ದಾರೆ.ಸಹಕಾರ ನಗರದಲ್ಲಿ ಐಷಾರಾಮಿ ಮನೆ ಇದೆ.ಕೋಟ್ಯಾಂತರ ಮೌಲ್ಯದ ಅಜಿತ್ ರೈ ಹೊಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ