ಸಾರಿಗೆ ಇಲಾಖೆ ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ಕೊಡ್ತೀವಿ : ರಾಮಲಿಂಗಾರೆಡ್ಡಿ

ಬುಧವಾರ, 28 ಜೂನ್ 2023 (12:31 IST)
ಬೆಂಗಳೂರು : ಸಾರಿಗೆ ಇಲಾಖೆ ನೌಕರರಿಗೆ ಯಾವುದೇ ಸಮಸ್ಯೆ ಆಗದಂತೆ ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
 
ಸರ್ಕಾರ ಹಣ ಕೊಡದೇ ಹೋದರೆ ಮುಂದಿನ ತಿಂಗಳು ಸಾರಿಗೆ ಇಲಾಖೆಯಲ್ಲಿ ಸಂಬಳ ಕೊಡಲು ಹಣವಿಲ್ಲ ಎಂಬ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾವು ಸಂಬಳ ಕೊಡದೇ ಇದ್ದಾಗ ಕೊಡೊಲ್ಲ ಅಂತ ಹೇಳಿ. ನಾವು ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ತಿಳಿಸಿದರು.

ಸರ್ಕಾರದಿಂದ ನಮಗೆ ಹಣ ಕೊಡುತ್ತಾರೆ. ನಮ್ಮ ಸಂಪನ್ಮೂಲಗಳಿಂದಲೂ ಹಣ ಸಂಗ್ರಹ ಆಗುತ್ತಿದೆ. 4 ನಿಗಮಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಸಂಬಳ ಕೊಡಲ್ಲ ಎಂದು ಊಹೆ ಮಾಡಿಕೊಂಡು ಹೇಳಲು ಆಗಲ್ಲ. ಸರಿಯಾದ ಸಮಯಕ್ಕೆ ಸಂಬಳ ಕೊಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ