ನಕಲಿ ಬಿಲ್‌ನಿಂದ ಸರ್ಕಾರದ ಹಣ ಲೂಟಿ ಮಾಡಲಾಗುತ್ತಿದೆ: ಬಸನಗೌಡ ಪಾಟೀಲ್ ಗಂಭೀರ ಆರೋಪ

Sampriya

ಸೋಮವಾರ, 16 ಡಿಸೆಂಬರ್ 2024 (15:58 IST)
ಬೆಂಗಳೂರು: ನಕಲಿ ಬಿಲ್‌ಗಳನ್ನು ಸೃಷ್ಟಿಸಿ, ಸರ್ಕಾರದ  ಹಣ ಲೂಟಿ ಮಾಡಲಾಗುತ್ತಿದೆ. ಇದು ಸರ್ಕಾರಿ ಕಾರು ಚಾಲಕರು, ಪೆಟ್ರೋಲ್ ಬಂಕ್‌ಗಳು ಮತ್ತು ಸೇವಾ ಕೇಂದ್ರಗಳಲ್ಲಿಯೂ ನಡೆಯುತ್ತಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಸರ್ಕಾರಿ ಕಾರು ಚಾಲಕರು, ಪೆಟ್ರೋಲ್ ಬಂಕ್‌ಗಳು ಮತ್ತು ಸೇವಾ ಕೇಂದ್ರಗಳನ್ನು ಒಗ್ಗೂಟಿ ಈ ಮಾಫಿಯಾ ನಡೆಸುತ್ತಿದ್ದು, ನಕಲಿ ಪೆಟ್ರೋಲ್ ಬಿಲ್‌ಗಳನ್ನು ತಯಾರಿಸಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಿದೆ ಎಂದರು.

ಇಲಾಖೆಗೆ ಬರುವ ಬಿಲ್‌ಗಳನ್ನು ಯಾವುದೇ ಕ್ರಾಸ್ ಚೆಕ್ ಮಾಡದೆ ಸಹಿ ಹಾಕಲಾಗುತ್ತಿದೆ ಎಂದರು.

ಸರ್ಕಾರಿ ಕಾರುಗಳಿಗೆ ಇಂಧನ ತುಂಬಲು ಇಲಾಖೆಯ ಮುದ್ರೆ ಇಲ್ಲ. ಸರ್ಕಾರಿ ಚಾಲಕರು ನಿಗದಿತ
ನಿಯಮಗಳನ್ನು ಉಲ್ಲಂಘಿಸಿ ಇಂಡೆಂಟ್ ತುಂಬುತ್ತಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯಿಂದ ಇಂತಹ ದುರುಪಯೋಗವಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಇಲಾಖೆಯ ಕಾರ್ಯದರ್ಶಿ ಮನೋಜ್ ಜೈನ್ ತುಂಬಿಸಿಕೊಂಡಿರುವ ಇಂಧನದ ಮಾಹಿತಿ ಸಂಪೂರ್ಣ ಕಗ್ಗಂಟಾಗಿದೆ. 20 ಲೀಟರ್ ಪೆಟ್ರೋಲ್‌ಗೆ ಖರೀದಿಸಿದ ಇಂಡೆಂಟ್ ಅನ್ನು 50 ಲೀಟರ್‌ ಎಂದು ತಿರುಚಲಾಗಿದೆ ಎಂದು ಯತ್ನಾಳ್‌ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ