ಕೇರಳದಲ್ಲಿ ಕುಟುಂಬವೊಂದು ಕಷ್ಟಗಳಿಂದ ನರಳುತ್ತಿತ್ತು. ಸಾಲದ ಶೂಲದಲ್ಲಿ ಸಿಕ್ಕಿಹಾಕಿಕೊಂಡ ಕುಟುಂಬ ಹೇಗಾದರೂ ಸರಿ ಸಾಲನ ಸುಳಿಯಿಂದ ತಪ್ಪಿಸಿಕೊಂಡು ಬದುಕಬೇಕೆಂದು ಸ್ವಂತ ಮನೆಯನ್ನೇ ಮಾರಾಟ ಮಾಡಲು ನಿರ್ಧಾರ ಮಾಡಿತ್ತು. ಆದರೆ ಅವರ ಪಾಲಿಗೆ ವಿಧಿ ಇನ್ನೂ ಚೆನ್ನಾಗಿರುವುದನ್ನೇ ಕಾಯ್ದಿರಿಸಿತ್ತು. ಪ್ರೀತಿಯ ಮನೆಯನ್ನು ಮಾರಾಟ ಮಾಡಿ ಅದು ಪರರ ಪಾಲಾಗಲು ಬರೀ 2 ಗಂಟೆ ಬಾಕಿ ಇತ್ತು. ಆದರೆ ಅಷ್ಟು ಹೊತ್ತಿಗೆ ಈ ಕುಟುಂಬಕ್ಕೆ ಬರೋಬ್ಬರಿ 1 ಕೋಟಿ ರೂಪಾಯಿಯ ಲಾಟರಿ ಹೊಡೆದಿದೆ.
ಕಷ್ಟಪಟ್ಟು ಕಟ್ಟಿದ ಮನೆಯೇ ಕೈತಪ್ಪುತ್ತಿತ್ತು
ಭಾರೀ ಸಾಲದ ಸುಳಿಯಲ್ಲಿ ತತ್ತರಿಸಿರುವ ಬಾವ ಮತ್ತು ಅವರ ಪತ್ನಿ ಅಮಿನಾ (45) ಎಂಟು ತಿಂಗಳ ಹಿಂದೆ ನಿರ್ಮಿಸಿದ 2,000 ಚದರ ಅಡಿಯ ತಮ್ಮ ಮನೆಯನ್ನು ಬ್ಲಾಕ್‌ನಲ್ಲಿ ಇರಿಸಿದ್ದಾರೆ.
ಇಬ್ಬರು ಹೆಣ್ಮಕ್ಕಳೊಂದಿಗೆ ಬಾಡಿಗೆ ಮನೆಗೆ ಹೋದ ದಂಪತಿ
ಭಾನುವಾರ ಸಂಜೆ 5 ಗಂಟೆಗೆ, ಮನೆಯನ್ನು ಕೊಳ್ಳಲು ಒಪ್ಪಂದವನ್ನು ಮಾಡಿ ಟೋಕನ್ ಮೊತ್ತದೊಂದಿಗೆ ಮನೆಗೆ ಬರಲು ಒಪ್ಪಿಕೊಂಡಿತ್ತು. ನಮಗೆ 45 ಲಕ್ಷ ರೂಪಾಯಿ ಸಾಲ ಇರುವುದರಿಂದ ಮನೆಗೆ 45 ಲಕ್ಷ ರೂಪಾಯಿ ಬೇಕಿತ್ತು. ಆದರೆ ಬ್ರೋಕರ್ ಮತ್ತು ಪಕ್ಷ 40 ಲಕ್ಷ ರೂ ಎಂದಿದ್ದರು. ಆದರೆ ದಂಪತಿ ಯಾವುದೇ ಬೆಲೆಗೆ ಆ ರಾತ್ರಿ ಮನೆ ಬಿಡಲು ಒಪ್ಪಿಕೊಂಡರು. ಅವರ ಇಬ್ಬರು ಹೆಣ್ಣುಮಕ್ಕಳೊಂದಿಗೆ ಬಾಡಿಗೆ ಮನೆಗೆ ತೆರಳಿದರು.