ಬೆಂಗಳೂರು : 2024 ಚುನಾವಣೆ ನಮ್ಮ ಮುಂದೆ ಇದೆ. ಅಂತೆಯೇ ಜವಾಬ್ದಾರಿಯೂ ಬಹಳಷ್ಟಿದೆ.
ಈಗ ಕರ್ನಾಟಕವನ್ನು 2023ರಲ್ಲಿ ಮತ್ತೊಮ್ಮೆ ಭಾಜಪದ ಕಮಲವನ್ನು ಅರಳಿಸುವ ಸಮಯ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಐದು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಗೆ ಭೇಟಿ ನೀಡಿ ವಿಜಯೋತ್ಸವ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಮ್ಮೆಲ್ಲರ ಜವಾಬ್ದಾರಿ ಹೆಚ್ಚಾಗಲಿದೆ.
ಇನ್ನಷ್ಟು ಚುರುಕಾಗಿ ಜಾಗೃತವಾಗಿ ಮತದಾರರ ಬಳಿಗೆ ಹೋಗಿ ಬಜೆಟ್ನಲ್ಲಿ ಘೋಷಣೆ ಮಾಡಿರುವ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕಿದೆ. ಅಧಿಕಾರಿಗಳಿಗೆ ನಾನು ಈಗಾಗಲೇ ಸೂಚನೆಯನ್ನು ನೀಡಿದ್ದೇನೆ.
ಈ ತಿಂಗಳಿನೊಳಗೆ ಕಡತಗಳು ಸಿದ್ಧವಾಗಬೇಕು. ಏಪ್ರಿಲ್ ತಿಂಗಳ ಒಳಗೆ ಬಜೆಟ್ನಲ್ಲಿ ಏನೇನು ಕಾರ್ಯಕ್ರಮಗಳನ್ನು ಇಲಾಖೆಗಳಿಗೆ ಕೊಟ್ಟಿದ್ದೇವೆ ಅವೆಲ್ಲವುಗಳಿಗೆ ಕಾರ್ಯಾದೇಶ ಆಗಬೇಕು ಎಂದು ಸೂಚಿಸಲಾಗಿದೆ.
ಕೂಡಲೇ ಎಲ್ಲಾ ಯೋಜನೆಗಳನ್ನು ಪ್ರಾರಂಭಿಸಿ, ಅನುಷ್ಠಾನಗೊಳಿಸುತ್ತೇವೆ. ಕಟ್ಟಕಡೆಯ ವ್ಯಕ್ತಿಗೂ ಯೋಜನೆಗಳನ್ನು ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.