ಬೆಂಗಳೂರು ಪೊಲೀಸರಿಗೆ ನೆರವಾದ ‘ಲವ್ ಮಾಕ್ ಟೈಲ್’ ಅದಿತಿ!

ಶನಿವಾರ, 11 ಏಪ್ರಿಲ್ 2020 (10:06 IST)
ಬೆಂಗಳೂರು: ಲವ್ ಮಾಕ್ ಟೈಲ್ ಸಿನಿಮಾ ನೋಡಿದವರಿಗೆ ಅದಿತಿ ಪಾತ್ರಧಾರಿ ಬಗ್ಗೆ ಗೊತ್ತೇ ಇರುತ್ತದೆ. ಮಾತು ಮಾತಿಗೂ ಹೆಂಗೆ ನಾವು ಎನ್ನುತ್ತಾ ಚಟಪಟ ಮಾತನಾಡುವ ಅದಿತಿ ಪಾತ್ರವನ್ನು ಬೆಂಗಳೂರು ಪೊಲೀಸರು ಈಗ ಲಾಕ್ ಡೌನ್ ಬಗ್ಗೆ ಜಾಗೃತಿ ಮೂಡಿಸಲು ಬಳಸಿಕೊಂಡಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಅದಿತಿ ಫೋಟೋ ಹಾಕಿ ‘ಕೊರೋನಾವನ್ನು ಹೊಡೆದೋಡಿಸಲು ನಾವು ಮನೆಯಲ್ಲೇ ಇರುತ್ತೇವೆ. ಹೆಂಗೆ ನಾವು?’ ಎಂದು ಅಡಿಬರಹ ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ.

ಜನರಿಗೂ ಈ ಹೊಸ ಪರಿಯ ಜಾಗೃತಿ ಇಷ್ಟವಾಗಿದೆ. ಅಷ್ಟೇ ಅಲ್ಲ, ಲಾಕ್ ಡೌನ್ ಕ್ರಮಗಳನ್ನು ಶ್ರದ್ಧೆಯಿಂದ ಅನುಸರಿಸುವ ಎಲ್ಲಾ ಬೆಂಗಳೂರಿಗರಿಗೆ ಚಪ್ಪಾಳೆ. ಸಕ್ಕತ್ ನೀವು ಎಂದು ಅಭಿನಂದಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ