ಆಕೆ ಅಪ್ರಾಪ್ತೆ ಬಾಲಕಿ. ಆದರೂ ಯುವಕನೊಬ್ಬನೊಂದಿಗೆ ಲವ್ ನಲ್ಲಿ ಬಿದ್ದಿದ್ದಳು.
ತಂದೆ ತಾಯಿ ಕೆಲಸಕ್ಕೆ ಹೋದ ಮೇಲೆ ಮನೆಗೆ ಪ್ರಿಯಕರ ಬಂದಿದ್ದಾನೆ. ಆತನ ಜೊತೆ ಬಾಲಕಿ ಪ್ರೇಮದಲ್ಲಿ ಮುಳುಗಿದ್ದಾಳೆ.
ಈ ವೇಳೆ ಮನೆಗೆ ಬಂದ ಆರು ವರ್ಷದ ಬಾಲಕಿಯ ತಮ್ಮ ಇಬ್ಬರನ್ನೂ ಒಟ್ಟಿಗೆ ನೋಡಿದ್ದಾನೆ.
ಪ್ರಿಯಕರ ತನ್ನ ಪ್ರೇಯಸಿಯ ತಮ್ಮನನ್ನೇ ಕೊಲೆ ಮಾಡಿದ್ದಾನೆ. ಆ ಬಳಿಕ ಪೋಷಕರಿಗೆ ಬಾಲಕ ಮನೆ ಮೇಲಿಂದ ಬಿದ್ದು ಸತ್ತಿದ್ದಾನೆ ಅಂತ ಬಾಲಕಿ ಕಥೆ ಹೆಣೆದಿದ್ದಾಳೆ.
ತಡವಾಗಿ ಬಾಲಕಿ ಬಾಯಿ ಬಿಟ್ಟಿದ್ದು, ತನ್ನ ತಮ್ಮನ ಕೊಲೆಗೆ ಪ್ರಿಯರಕನೇ ಕಾರಣ ಎಂದು ಹೇಳಿದ್ದಾಳೆ.
ಉತ್ತರಪ್ರದೇಶದಲ್ಲಿ ಘಟನೆ ನಡೆದಿದ್ದು, ಬಾಲಕಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರೆ, ಆರೋಪಿ ಪರಾರಿಯಾಗಿದ್ದಾನೆ.