ಅಣ್ಣಾಮಲೈ ಪದಕ ಹಾಕಲು ಬಂದರೆ ಬೇಡ ಎಂದ ಯುವಕ: ವಿಡಿಯೋ

Krishnaveni K

ಮಂಗಳವಾರ, 26 ಆಗಸ್ಟ್ 2025 (10:37 IST)
ಚೆನ್ನೈ: ಶೂಟಿಂಗ್ ಸ್ಪರ್ಧೆಯೊಂದರಲ್ಲಿ ಗೆದ್ದ ಯುವಕನಿಗೆ ಬಿಜೆಪಿ ನಾಯಕ ಅಣ್ಣಾಮಲೈ ಪದಕ ಹಾಕಲು ಬಂದರೆ ಆತ ನಿರಾಕರಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಯುವಕ ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಕೈಗಾರಿಕಾ ಸಚಿವ ಟಿಆರ್ ಬಿ ರಾಜಾ ಅವರ ಪುತ್ರ ಸೂರ್ಯ ರಾಜ ಬಾಲು ಎನ್ನಲಾಗಿದೆ. 51 ನೇ ರಾಜ್ಯ ಶೂಟಿಂಗ್ ಕ್ರೀಡಾ ಕೂಟದಲ್ಲಿ ಅಣ್ಣಾಮಲೈ ಅತಿಥಿಯಾಗಿ ಪಾಲ್ಗೊಂಡಿದ್ದರು.

ಈ ವೇಳೆ ಅಣ್ಣಾಮಲೈ ಪ್ರಶಸ್ತಿ ಪ್ರಧಾನ ನಡೆಸಿದರು. ವಿಜೇತರ ಕೊರಳಿಗೆ ಪದಕ ಹಾಕಲು ಬಂದಿದ್ದಾರೆ. ಆದರೆ ಸೂರ್ಯ ರಾಜು ಪದಕ ಬೇಡ ಎಂದು ನಿರಾಕರಿಸಿದ್ದು ಅಣ್ಣಾಮಲೈ ಒತ್ತಾಯಿಸಿದರೂ ಹಾಕಿಸಿಕೊಳ್ಳಲಿಲ್ಲ. ಬಳಿಕ ಕೈಗೆ ನೀಡಿದರು.

ಕೆಲವು ದಿನಗಳ ಹಿಂದೆಯೂ ತಮಿಳುನಾಡಿನಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ತಿರುನಲ್ವೇಲಿಯ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ 32 ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ವಿದ್ಯಾರ್ಥಿನಿ  ಜೀನ್ ಜೋಸೆಫ್ ಎಂಬವರು ರಾಜ್ಯಪಾಲ ಆರ್ ಎನ್ ರವಿಯಿಂದ ಪದವಿ ಪಡೆಯಲು ನಿರಾಕರಿಸಿದ್ದರು. ಬಳಿಕ ಕುಲಪತಿಗಳಿಂದ ಸ್ವೀಕರಿಸಿದ್ದರು.

அசிங்கப்பட்டான் ஆடு மேய்ப்பன் @annamalai_k pic.twitter.com/19l5XerZfH

— ஜோக்கர் ᵖʰᵒᵉⁿⁱˣ (@lahudapandi) August 25, 2025

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ