ಮಕ್ಕಳಲ್ಲಿ ಹೆಚ್ಚಾಗ್ತಿರುವ ಮದ್ರಾಸ್ ಐ

ಶನಿವಾರ, 29 ಜುಲೈ 2023 (15:23 IST)
ಕಳೆದ 15 ದಿನದಿಂದ ಮಳೆ ಇರೋದರಿಂದ ವೈರಸ್ ಆಕ್ಟೀವ್ ಆಗಿ ವಾತಾವರಣದಲ್ಲಿ ಸಕ್ರಿಯವಾಗಿರುವುದರಿಂದ ಮದ್ರಾಸ್ ಐ ಹೆಚ್ಚಾಗ್ತಿದೆ. ಮಕ್ಕಳು ಸ್ಕೂಲ್ ಗಳಲ್ಲಿ ಹೆಚ್ಚು ಒಡನಾಟ ಇರೋದರಿಂದ ಜಾಸ್ತಿ ಕಾಣಿಸಿಕೊಳ್ತಿದೆ. ಒಬ್ಬರಿಂದ ಒಬ್ಬರಿಗೆ ಹರಡುವ ಚಾನ್ಸ್ ಜಾಸ್ತಿ ಇದೆ.
ಸದ್ಯ ಪ್ರತಿನಿತ್ಯ 5ರಿಂದ 10 ಕೇಸ್ ಗಳು ಬರ್ತಿವೆ. ಮುಂದೆ ಕೇಸ್ ಜಾಸ್ತಿಯಾದ್ರೆ ಪ್ರತ್ಯೇಕ ಕೌಂಟರ್ ಮಾಡೋ ಕೆಲಸ ಮಾಡ್ತೀವಿ. ಹೊರಗಡೆ ಟ್ರೀಟ್ ಮೆಂಟ್ ಮಾಡಿ ಕಳುಹಿಸಲಾಗುತ್ತೆ. ಮಕ್ಕಳು ಪದೇ ಪದೇ ಕಣ್ಣು ಮುಟ್ಟೋದರಿಂದ ಸೋಂಕು ಬರ್ತಿದೆ. ಪೋಷಕರು ಮಕ್ಕಳ ಬಗ್ಗೆ ಗಮನಹರಿಸಬೇಕು. ಪದೇ ಪದೇ ಕಣ್ಣು ಮುಟ್ಟಬಾರದು. ಸೋಪಿನಿಂದ ಆಗಾಗ ಕೈಗಳನ್ನ ತೊಳೆಯಬೇಕು ಎಂದು ಮದ್ರಾಸ್ ಐ ಮುಂಜಾಗೃತೆ ಬಗ್ಗೆ ವೈದ್ಯರು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ