ಮಹದಾಯಿ ಹೋರಾಟದಲ್ಲಿ ಪೊಲೀಸರಿಂದ ಅಮಾಯಕರ ಮೇಲೆ ಅಮಾನವೀಯ ದೌರ್ಜನ್ಯ ನಡೆದಿದೆ. ನೀವು ಬೆಂಗಳೂರಿನಲ್ಲಿ ಕುಳಿತು ಮಾಡುವುದೇನು? ನಿಮಗೆ ವಾಹನ ನೀಡಿರುವುದು ಏಕೆ? ಘಟನಾ ಸ್ಥಳಕ್ಕೆ ಹೋಗುವುದಕ್ಕೇನಾಗಿದೆ ಎಂದು ಹೈಕೋರ್ಟ್ ನ್ಯಾಯಾಧೀಶರು, ಮಾನವ ಹಕ್ಕುಗಳ ಆಯೋಗದ ರಿಜಿಸ್ಟಾರ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಕರಣದ ಕುರಿತು ಸಂಪೂರ್ಣ ವರದಿ ನೀಡಲು ಮಾನವ ಹಕ್ಕುಗಳ ಆಯೋಗದ ರಿಜಿಸ್ಟಾರ್ ಒಂದು ವಾರಗಳ ಕಾಲಾವಕಾಶ ಕೇಳಿದರು. ಆದರೆ, ನಿಮ್ಮ ವರದಿ ನಿಖರವಾಗಿಲ್ಲ. ಅಲ್ಲಿಯವರೆಗೂ ಪೊಲೀಸರಿಂದ ಲಾಠಿ ಏಟು ತಿಂದವರ ಗತಿ ಏನು ಎಂದು ಕಾಲಾವಕಾಶ ನೀಡಲು ಕೋರ್ಟ್ ನಿರಾಕರಿಸಿದೆ.