ಮಹದಾಯಿ ಪಾದಯಾತ್ರೆ ಮಾಡುತ್ತೇವೆ : ಪಾಟೀಲ್

ಮಂಗಳವಾರ, 25 ಜನವರಿ 2022 (07:16 IST)
ಬೆಳಗಾವಿ : ಮೇಕೆದಾಟು ಪಾದಯಾತ್ರೆಯಂತೆಯೇ ಮಹದಾಯಿ ಪಾದಯಾತ್ರೆ ಮಾಡುತ್ತೇವೆ.
 
ಈಗಾಗಲೇ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈ ಸಂಬಂಧ ನಿಲುವು ತೆಗೆದುಕೊಂಡು ಅಧಿಕೃತ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹದಾಯಿ ಯೋಜನೆಯು ಹುಬ್ಬಳ್ಳಿ, ಧಾರವಾಡ ಸೇರಿ ನಾಲ್ಕಾರು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಇರುವ ಯೋಜನೆಯಾಗಿದೆ. ಮಹದಾಯಿ ಕಣಿವೆಯಲ್ಲಿ ಸುಮಾರು 200 ಟಿಎಂಸಿ ನೀರು ಸಿಗುತ್ತದೆ. ನಮ್ಮ ಸರಹದ್ದಿನಲ್ಲಿ 50 ರಿಂದ 60 ಟಿಎಂಸಿ ನೀರು ಬರುತ್ತದೆ ಎಂದರು. 

ಮಲಪ್ರಭಾ ಡ್ಯಾಮನಲ್ಲಿ ನೀರಿನ ಕೊರತೆ ಇರುವುದರಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಬೇಡಿಕೆ ಇದೆ. ಒಟ್ಟಾರೆ ನಾವು 36 ಟಿಎಂಸಿ ನೀರಿಗಾಗಿ ಬೇಡಿಕೆ ಸಲ್ಲಿಸಿದ್ದೆವು. ಅದರಲ್ಲಿ 7.5 ಟಿಎಂಸಿ ಕುಡಿಯುವ ನೀರಿಗಾಗಿ ಕೇಳಿದ್ದೆವು. ಆದರೆ, ಟ್ರಿಬ್ಯುನಲ್ ನಮಗೆ 3.9 ಟಿಎಂಸಿ ನೀರು ನೀಡಿದೆ. ಅದು ನಮಗೆ ಯಾವುದಕ್ಕೂ ಸಾಲುವುದಿಲ್ಲ ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ