ಮಹಾದಾಯಿ ನೀರು ಬಿಡಲು ಒಂದು ಫೋನ್ ಮಾಡೋಕೆ ಆಗದವರು ಏನ್ ಪ್ರಧಾನಮಂತ್ರಿ– ಜಿ.ಪರಮೇಶ್ವರ್

ಗುರುವಾರ, 28 ಡಿಸೆಂಬರ್ 2017 (15:03 IST)
ಗೋವಾ ಮುಖ್ಯಮಂತ್ರಿ ಪರಿಕ್ಕರ್ ಅವರಿಗೆ ಒಂದು ಫೋನ್ ಮಾಡಿ ನೀರು ಬಿಡಿ ಅಂದಿದ್ದರೆ ನೀರು ಬಿಡುತ್ತಿದ್ದರು. ಇಷ್ಟೂ ಮಾಡೋಕೆ ಆಗದವರು ಏನ್ ಪ್ರಧಾನಮಂತ್ರಿ ಎಂದು ನರೇಂದ್ರ ಮೋದಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಜಿ,ಪರಮೇಶ್ವರ ವಾಗ್ದಾಳಿ ನಡೆಸಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾದಾಯಿ ನೀರಿನ ಸಮಸ್ಯೆ ಬಗೆಹರಿಸುವುದು ಐದು ನಿಮಿಷದ ಕೆಲಸ. ನರೇಂದ್ರಮೋದಿ ಅವರು ಪರಿಕ್ಕರ್ ಅವರಿಗೆ ಒಂದು ಫೋನ್ ಮಾಡಿದ್ದರೆ ಸಾಕಾಗಿತ್ತು. ಅಷ್ಟಕ್ಕೆ ಗೋವಾ ಮುಖ್ಯಮಂತ್ರಿ ನೀರು ಬಿಡುತ್ತಿದ್ದರು ಎಂದು ತಿಳಿಸಿದ್ದಾರೆ. 
 
ಸುಳ್ಳು ಹೇಳಿ ಓಟು ಹಾಕಿಸುತ್ತೇವೆ ಎಂದು ಯಡಿಯೂರಪ್ಪ ಹಾಗೂ ಈಶ್ವರಪ್ಪ ಹುಡುಗಾಟ ಆಡುತ್ತಿದ್ದಾರೆ. ಕೆಪಿಸಿಸಿ ಕಚೇರಿ ಮುಂದೆ ಬಿಜೆಪಿ ಪಕ್ಷದವರು ಪ್ರತಿಭಟನೆ ನಡೆಸಿದರೂ, ಕಾಂಗ್ರೆಸ್ ಪಕ್ಷದವರು ಯಾವುದೇ ಗಲಾಟೆ ಮಾಡಿಲ್ಲ. ಒಂದು ಪಕ್ಷದಿಂದ ಮತ್ತೊಂದು ಪಕ್ಷದ ಮುಂದೆ ಧರಣಿ ಮಾಡಿದ್ದನ್ನು ನಾನು ಎಂದೂ ಕೇಳಿಯೇ ಇಲ್ಲ ಎಂದಿದ್ದಾರೆ.
 
ಮಹಾದಾಯಿ ವಿಚಾರದಲ್ಲಿ ಒಂದು ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದ ಗೋವಾ ಮುಖ್ಯಮಂತ್ರಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಷ್ಟುಬಾರಿ ಪತ್ರ ಬರೆದರೂ ಉತ್ತರ ಏಕೆ ಕೊಟ್ಟಿಲ್ಲ? ಇದು ರಾಜಕೀಯವಲ್ಲದೆ ಮತ್ತೇನು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ