ಮಹಾರಾಷ್ಟ್ರ ಸಿಎಂ ಶಿಂಧೆ ಬಣದ ಹೋಟೆಲ್ ಬಿಲ್ ಶಾಕಿಂಗ್..!!!

ಶನಿವಾರ, 2 ಜುಲೈ 2022 (15:53 IST)
ಮಹಾರಾಷ್ಟ್ರದಲ್ಲಿ ಅಘಾಡಿ ಸರ್ಕಾರ ಬಿದ್ದು ಹೋಗಿ ಶಿಂಧೆ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕಳೆದ ತಿಂಗಳು ಉದ್ದವ್‌ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಶಿಂಧೆ ಯಾರೂ ಊಹಿಸಿದ ಬೆಳವಣಿಗೆಯಲ್ಲಿ ಈಗ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪಟ್ಟಾಭಿಷಕ್ತರಾಗಿದ್ದಾರೆ.
ಈ ಧಿಡೀರ್‌ ಬೆಳವಣಿಗೆಯಿಂದ ಸಿಎಂ ಕುರ್ಚಿಯೊಬ್ಬಿಸಿದ ಉದ್ದವ್‌ ಠಾಕ್ರೆ ಈಗ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಈಗ ಶಿವಸೇನೆಯವರಿಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದೀವಿ ಅಂತ ಹೇಳ್ತಾ ಇದ್ದೀರಿ. ಈ ಕೆಲಸ ಮೊದಲೇ ಮಾಡಲಿಲ್ಲ. ಅವತ್ತು 2019ರಲ್ಲಿ ನಾವು ನಿಮ್ಮಿಂದ ದೂರ ಆಗಿದ್ದು ಅದೇ ಕಾರಣಕ್ಕೆ ತಾನೇ.. ಅವತ್ತು ಯಾಕೆ ಸಿಎಂ ಸ್ಥಾನ ಕೊಡ್ಲಿಲ್ಲ ಅಂತ ಕಿಡಿಕಾರಿದ್ದಾರೆ. ಇತ್ತ ಉದ್ದವ್‌ ಬಣದಿಂದ ಈಗ ಸಿಎಂ ಆಗಿರೋ ಏಕನಾಥ್‌ ಸೇರಿದಂತೆ 16 ಶಿವಸೈನಿಕರನ್ನ ಅನರ್ಹಗೊಳಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ವೇಳೆ ಮಾತನಾಡಿದ ಉದ್ದವ್‌ ಪರ ವಕೀಲ ಕಪಿಲ್‌ ಸಿಬಲ್‌ ʻ ಪ್ರಜಾಪ್ರಭುತ್ವ ಕುಣಿಯೋಕಾಗಲ್ಲ. ಅವರ್ಯಾರು ಪಕ್ಷದವರೇ ಅಲ್ಲ. ದಯವಿಟ್ಟು ಆದಷ್ಟು ಬೇಗ ವಿಚಾರಣೆ ಅಂತ ನಡೆಸಿ ಅಂತ ಕೇಳಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್‌ ನಾವು ಕೂಡ ಕಣ್ಮುಚ್ಚಿಕೊಂಡು ಕೂತಿಲ್ಲ. ಅರ್ಜಿಯನ್ನ ಜುಲೈ 11ರಂದು ವಿಚಾರಣೆ ನಡೆಸ್ತೀವಿ ಅಂತ ಹೇಳಿದೆ. ಇತ್ತ ಶಿಂಧೆ ಮಹಾರಾಷ್ಟ್ರದ ಮುಂದಿನ ಸಿಎಂ ಅಂತ ಘೋಷಣೆಯಾಗ್ತಿದ್ದಂತೆ ಗೋವಾದಲ್ಲಿದ್ದ ಶಿಂಧೆಸೇನೆಯ ಇತರ ಸೈನಿಕರು ಹೋಟೆಲ್‌ನಲ್ಲೇ ಭರ್ಜರಿ ಡಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗ್ತಿದ್ದಂತೆ ಇದಕ್ಕೆ ಸಿಎಂ ಶಿಂಧೆ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದುಈ ರೀತಿಯ ವರ್ತನೆ ಸರಿಯಿಲ್ಲ ಅಂತ ಖಂಡಿಸಿದ್ದಾರೆ. ಇನ್ನು ಇಷ್ಟೆಲ್ಲಾ ಮಹಾ ಹೈಡ್ರಾಮಕ್ಕೆ ನಾಟಕಕ್ಕೆ ವೇದಿಕೆ ಒದಗಿಸಿದ್ದು ಅಸ್ಸಾಂ. ಗುವಾಹಟಿಯ ಹೋಟೆಲ್‌ ಒಂದರಲ್ಲಿ ಸುಮಾರು 8ದಿನ ತಂಗಿದ್ದ ರೆಬೆಲ್‌ ಶಾಸಕರು ಉದ್ದವ್‌ ಸರ್ಕಾರವನ್ನೇ ಮಗುಚಿ ಹಾಕಿದ್ರು. ಇನ್ನು ಆ 8 ದಿನಕ್ಕೆ ಶಿಂಧೆ ಬಣ ಬರೋಬ್ಬರಿ 70 ಲಕ್ಷ ರೂಪಾಯಿ ಬಾಡಿಗೆ ಕಟ್ಟಿದೆ ಅಂತ ಹೋಟೆಲ್‌ ಆಡಳಿತ ಮಾಹಿತಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ