ಕಲಬುರಗಿ-ಬೀದರ್‌ ಜಿಲ್ಲೆ ರೈಲ್ವೆ ಸಂಪರ್ಕ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಮಂಗಳವಾರ, 24 ಅಕ್ಟೋಬರ್ 2017 (14:06 IST)
ಕಲಬುರಗಿ-ಬೀದರ್‌ ಜಿಲ್ಲೆಗಳ ನಡುವೆ ರೈಲ್ವೆ ಸಂಪರ್ಕ ಕಲ್ಪಿಸುವ 104 ಕಿ.ಮಿ ಉದ್ದದ ಮಹತ್ವದ ರೈಲ್ವೆ ಯೋಜನೆ ಪೂರ್ಣಗೊಂಡಿದ್ದು, ದಿನಾಂಕ 29 ರಂದು ಚಾಲನೆ ದೊರೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಬೀದರ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ, ಕಲಬುರಗಿ-ಬೀದರ್‌ ರೈಲು ಯೋಜನೆ ಆಗಿದ್ದರಿಂದ ಕಲಬುರಗಿಯಲ್ಲಿ ಉದ್ಘಾಟನೆ ಹಮ್ಮಿಕೊಳ್ಳುವ ಬದಲಾಗಿ ಬೀದರ್‌ನಲ್ಲಿ ಹಮ್ಮಿಕೊಂಡಿದ್ದಕ್ಕೆ ಕಲಬುರಗಿ ರಾಜಕೀಯ ನಾಯಕರಲ್ಲಿ ಆಕ್ರೋಶ ಮೂಡಿಸಿದೆ.
 
ರಾಜ್ಯ ಸರಕಾರ ಯೋಜನೆಗೆ ಅರ್ಧದಷ್ಟು ಹಣವನ್ನು ನೀಡಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಹ್ವಾನಿಸಬಹುದಿತ್ತು. ಸ್ಥಳೀಯ ಸಂಸದನಾದ ನನಗೆ ಕೂಡಾ ಆಹ್ವಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 
 
ಜಮ್ಮು ಕಾಶ್ಮಿರ, ಕೇಂದ್ರದಲ್ಲಿ ಅವರದೇ ಸರಕಾರವಿದೆ. ಆದಾಗ್ಯೂ ಜಮ್ಮು ಕಾಶ್ಮಿರದಲ್ಲಿ ಸಂಧಾನಕಾರರನ್ನು ನೇಮಕ ಮಾಡಿರುವುದು ಮೋದಿ ಸರಕಾರದ ವೈಫಲ್ಯವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ