ಬಿಜೆಪಿ ಪಕ್ಷ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗಾಗಿ ಘೋಷಣೆಗಳನ್ನು ಮಾತ್ರ ನೀಡಿದೆ. ಆದರೆ, ವಾಸ್ತವದಲ್ಲಿ ಯಾವುದೇ ಸಮುದಾಯಗಳಿಗೆ ಉಪಯೋಗವಾಗುವಂತಹ ಕಾರ್ಯ ಮಾಡಿಲ್ಲ. ರಾಹುಲ್ ಗಾಂಧಿ ಪ್ರಾಮಾಣಿಕರಾಗಿದ್ದು ಅವರ ಉದ್ದೇಶ ಶ್ರೇಷ್ಠವಾಗಿದೆ. ನಾವೆಲ್ಲರು ಒಂದಾಗಿ ಕಾರ್ಯನಿರ್ವಹಿಸೋಣ ಎಂದು ರಾಹುಲ್ ಭರವಸೆ ನೀಡಿದ್ದಾರೆ. ನಾವು ನೀಡುತ್ತಿರುವ ಬೆಂಬಲದ ಪ್ರತಿಫಲವಾಗಿ ಯಾವುದೇ ಹುದ್ದೆ, ಏನನ್ನೂ ಕೇಳಿಲ್ಲ ಎಂದು ತಿಳಿಸಿದ್ದಾರೆ.
ದೇಶದ ಆರ್ಥಿಕತೆಗೆ ಮಾರಕವಾಗಿರುವ ಜಿಎಸ್‌ಟಿ, ನೋಟು ನಿಷೇಧದಂತಹ ಮಹತ್ವದ ನಿರ್ಧಾರಗಳನ್ನು ಮೋದಿ ಸರಕಾರ ಅವಸರವಾಗಿ ತೆಗೆದುಕೊಂಡಿತು. ಬಿಜೆಪಿ ಆರೋಪಿಸುತ್ತಿದ್ದ ಎಲ್ಲಾ ಕಪ್ಪು ಹಣ ಶ್ವೇತ ಬಣ್ಣದಾಯಿತು. ಇದೀಗ ಉದ್ಯಮಿಗಳಿಗೆ ಇಂತಹ ಹೇಯ ನಿರ್ಧಾರದ ಅನುಭವವಾಗುತ್ತಿದೆ ಎಂದರು.
ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೈಜೋಡಿಸುವಂತೆ ಕಾಂಗ್ರೆಸ್ ಪಕ್ಷ ಕರೆ ನೀಡಿದ ಕೆಲವೇ ಗಂಟೆಗಳಲ್ಲಿ ಠಾಕೂರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರೆ, ಜಿಗ್ನೇಶ್ ಮೇವಾನಿ ಪ್ರತಿಕ್ರಿಯೆಗೆ ದೊರೆತಿಲ್ಲ ಎಂದು ಮೂಲಗಳು ತಿಳಿಸಿವೆ.