ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೊಸ ಬೇಡಿಕೆ
ಇದೀಗ ಲೋಕಸಭೆ ವಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಪರ ಲಾಬಿ ನಡೆಸಿದ್ದಾರೆ. ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ಖರ್ಗೆ ಒತ್ತಾಯಿಸಿದ್ದಾರೆ.
ರಾಮಲಿಂಗಾರೆಡ್ಡಿಗೆ ಬೆಂಗಳೂರಿನ ಮೂರು ನಾಲ್ಕು ಕ್ಷೇತ್ರಗಳ ಮೇಲೆ ಹೆಚ್ಚು ಹಿಡಿತವಿದೆ. ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ. ಕಾರ್ಯಕರ್ತರ ಜತೆಗೂ ಅವರಿಗೆ ಒಡನಾಟ ಚೆನ್ನಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ರಾಮಲಿಂಗಾ ರೆಡ್ಡಿ ಪರ ಬ್ಯಾಟಿಂಗ್ ನಡೆಸಿದ್ದಾರೆ. ಇಷ್ಟು ದಿನ ಸಚಿವ ಸ್ಥಾನ ಸಿಗದ ಬೇಸರದಲ್ಲಿ ಪಕ್ಷದ ಚಟುವಟಿಕೆಗಳಿಂದ ರಾಮಲಿಂಗಾ ರೆಡ್ಡಿ ದೂರವೇ ಉಳಿದಿದ್ದರು. ಈ ಬಾರಿ ಹಿರಿಯರಿಗೆ ನೀಡುವ ಕೋಟಾದಲ್ಲಿ ರಾಮಲಿಂಗಾರೆಡ್ಡಿ ಹೆಸರು ಸೇರ್ಪಡೆಯಾಗಲಿದೆಯೇ ನೋಡಬೇಕು.