ಊಹಾಪೋಹಗಳಿಗೆ ಮಮತಾ ಬ್ಯಾನರ್ಜಿ ತೆರೆ

ಗುರುವಾರ, 3 ನವೆಂಬರ್ 2022 (19:50 IST)
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚೆನ್ನೈನಲ್ಲಿರುವ ತಮಿಳುನಾಡು ಮುಖ್ಯಮಂತ್ರಿ M.K. ಸ್ಟಾಲಿನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ತೀವ್ರ ಕುತೂಹಲ ಕೆರಳಿಸಿದೆ. 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಕುರಿತು ಈ ವೇಳೆ ಮಾತುಕತೆ ನಡೆಸಲಾಗಿದೆ ಎಂಬ ಊಹಾಪೋಹಗಳಿಗೆ ಮಮತಾ ಬ್ಯಾನರ್ಜಿ ತೆರೆ ಎಳೆದಿದ್ದಾರೆ. ನಾವು ಯಾವುದೇ ರೀತಿಯ ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಿಲ್ಲ. ಸ್ಟಾಲಿನ್ ನನ್ನ ತಮ್ಮನಿದ್ದಂತೆ. ಹೀಗಾಗಿ, ಆತನ ಮನೆಗೆ ತೆರಳಿ, ಕಾಫಿ ಕುಡಿದು ಬಂದಿದ್ದೇನೆ ಎಂದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ M.K. ಸ್ಟಾಲಿನ್ ಅವರನ್ನು ಬುಧವಾರ ಚೆನ್ನೈನಲ್ಲಿ ಭೇಟಿಯಾದ ಮಮತಾ ಬ್ಯಾನರ್ಜಿ, ಇದೊಂದು ಸೌಜನ್ಯದ ಭೇಟಿ. ಸ್ಟಾಲಿನ್​​​​ ನನ್ನ ಸಹೋದರನಿದ್ದಂತೆ. ಇಬ್ಬರು ರಾಜಕೀಯ ನಾಯಕರು ಒಟ್ಟಿಗೆ ಇರುವಾಗ ನಾವು ಏನನ್ನಾದರೂ ಮಾತನಾಡಬಹುದು. ರಾಜಕೀಯಕ್ಕಿಂತ ಅಭಿವೃದ್ಧಿ ದೊಡ್ಡದು ಎಂದು ನಾನು ಭಾವಿಸುತ್ತೇನೆ. ಹೀಗಾಗಿ ನಾವು ರಾಜ್ಯದ ಅಭಿವೃದ್ಧಿ ಬಗ್ಗೆಯೂ ಚರ್ಚಿಸಬಹುದು. ಕೇವಲ ರಾಜಕೀಯ ಚರ್ಚೆ ನಡೆಯುತ್ತದೆ ಎಂದು ನೀವು ಭಾವಿಸಿದರೆ ಅದು ತಪ್ಪು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ