ಸೆಕ್ಸ್ ಮಾಡುತ್ತಲೇ ಪ್ರಾಣಬಿಟ್ಟ ರಸಿಕ

ಬುಧವಾರ, 1 ಫೆಬ್ರವರಿ 2017 (14:07 IST)
ಯುವಕನೊಬ್ಬ ತನ್ನ ಪ್ರೇಯಸಿಯ ಜೊತೆ ಸೆಕ್ಸ್ ಮಾಡುತ್ತಿರುವಾಗಲೇ ಸಾವನ್ನಪ್ಪಿದ ಘಟನೆ ತೈವಾನ್‌ನಲ್ಲಿ ನಡೆದಿದೆ.
22ರ ಪ್ರಾಯದ ಹುವಾಂಗ್ ಎಂಬ ಯುವಕ ತನ್ನ ಪ್ರೇಯಸಿ ಫು ಎಂಬುವವಳ ಜೊತೆ ಬೆಳಗಿನ ಜಾವ ಸೆಕ್ಸ್ ಕ್ರಿಯೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ತೀವ್ರ ಹೃದಯಾಘಾತದಿಂದಾಗಿ ಪ್ರೇಯಸಿ ಮೇಲೆಯೇ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ. 
 
ಹುವಾಂಗ್ ಸೆಕ್ಸ್ ಮಾಡುತ್ತಿರುವಾಗ ಅತೀ ಉದ್ರೇಕಗೊಂಡಿದ್ದ, ಅವನ ಮೈಯಿಂದ ಬೆವರು ಸುರಿಯುತ್ತಿತ್ತು. ಇದ್ದಕ್ಕಿದ್ದಂತೆ ಸೆಕ್ಸ್ ಕ್ರಿಯೆ ನಿಲ್ಲಿಸಿದ ಅವನು, ನನ್ನ ಮೇಲೆಯೇ ಬಿದ್ದುಬಿಟ್ಟ. ಭಯಗೊಂಡ ನಾನು ಅವನನ್ನು ಆಸ್ಪತ್ರೆಗೆ ಕರೆದೊಯ್ದೆ. ಆದರೆ, ಅವನು ಬದುಕುಳಿಯಲಿಲ್ಲ ಎಂದು ಹುವಾಂಗ್‌ನ ಪ್ರೇಯಸಿ ಫು ತಿಳಿಸಿದ್ದಾಳೆ. 
 
ಹುವಾಂಗ್‌ನನ್ನು ಆಸ್ಪತ್ರೆಗೆ ಕರೆತಂದಾಗಲೇ ಅವನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆತನ ಸಾವಿಗೆ ಹೃದಯಾಘಾತವೇ ಕಾರಣ ಎಂದು ಕೀಲುಂಗ್ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ