ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ಯುವತಿಗೆ ಪಂಗನಾಮ

ಭಾನುವಾರ, 30 ಜನವರಿ 2022 (09:38 IST)
ಬೆಂಗಳೂರು: ಇಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ಯುವತಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ರೇವಾ ಕಾಲೇಜಿನಲ್ಲಿ ಯುವತಿಗೆ ಎಸಿಎಂ ವಿಭಾಗದಲ್ಲಿ ಸೀಟು ಸಿಕ್ಕಿತ್ತು. ಆದರೆ ಯುವತಿ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಪ್ರಯತ್ನಿಸುತ್ತಿದ್ದಳು. ಈ ವೇಳೆ ಆರೋಪಿ ಯುವತಿಯ ಮೊಬೈಲ್ ಗೆ ಸಂದೇಶ ಕಳುಹಿಸಿ ಕಂಪ್ಯೂಟರ್ ಸೈನ್ಸ್ ವಿಭಾಗಕ್ಕೆ ಸೀಟು ಸಿಕ್ಕಿದೆ. 1.27 ಲಕ್ಷ ರೂ. ಕಳುಹಿಸಿಕೊಡುವಂತೆ ಕೇಳುತ್ತಾನೆ.

ಇದನ್ನು ನಂಬಿದ ಯುವತಿಯ ತಂದೆ ಅಷ್ಟು ಹಣವನ್ನು ಆರೋಪಿಯ ಖಾತೆಗೆ ನೀಡುತ್ತಾರೆ. ಕಾಲೇಜಿನಲ್ಲಿ ವಿಚಾರಿಸಿದಾಗ ಆತ ಅಲ್ಲಿನ ಸಿಬ್ಬಂದಿಯಲ್ಲ ಎಂದು ತಿಳಿದುಬರುತ್ತದೆ. ಅದರಂತೆ ಯುವತಿಯ ತಂದೆ ಪೊಲೀಸರಿಗೆ ದೂರು ನೀಡುತ್ತಾರೆ. ವಿಚಾರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನಿಂದ ಹಣ, ಚಿನ್ನಾಭರಣ, ಲ್ಯಾಪ್ ಟಾಪ್ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ