ಚಿನ್ನದ ಅಂಗಡಿ ಮಾಲಿಕನ ಮನೆಗೇ ಕನ್ನ ಹಾಕಿದ ಮಹಿಳೆಯರ ಗ್ಯಾಂಗ್!

ಭಾನುವಾರ, 30 ಜನವರಿ 2022 (09:00 IST)
ವಿಜಯಪುರ: ಮಹಿಳೆಯರ ಗ್ಯಾಂಗ್ ಒಂದು ಚಿನ್ನದ ಅಂಗಡಿ ಮಾಲಿಕನ ಮನೆಗೆ ಕನ್ನ ಹಾಕಲು ಯತ್ನಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಚಿನ್ನದ ಅಂಗಡಿ ಮಾಲಿಕನ ಮನೆಗೆ ಆಂಧ್ರ ಮೂಲದ 4-5 ಜನರ ಮಹಿಳೆಯರ ತಂಡ ದೋರೆಡೆಗೆ ಬಂದಿತ್ತು. ಈ ವೇಳೆ ಮಾಲಿಕನ ಪತ್ನಿ ಮಹಿಳೆಯರಿಗೆ ಕಡುಗೋಲಿನಿಂದ ಹೊಡೆಯಲು ಬಂದಿದ್ದರು. ಸದ್ದು ಕೇಳಿ ನೆರೆಮನೆಯವರೂ ಓಡಿ ಬಂದಿದ್ದರು.

ಈ ಗೌಜಿ ಗದ್ದಲದ ನಡುವೆ ಓರ್ವ ಮಹಿಳೆಯನ್ನು ಸ್ಥಳೀಯರು ಹಿಡಿದಿದ್ದು, ಇನ್ನುಳಿದ ಮಹಿಳೆಯರು ಓಡಿ ಹೋಗಿದ್ದಾರೆ. ಇದೀಗ ಸಿಕ್ಕಿಬಿದ್ದ ಮಹಿಳೆಯನ್ನು ಪೊಲೀಸರಿಗೊಪ್ಪಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ