ಮದುವೆ ಆಗ್ತೀನಿ ಅಂತ 35 ಯುವತಿಯರಿಗೆ ವಂಚಿಸಿದ ಸುರಸುಂದರ!

ಬುಧವಾರ, 1 ಸೆಪ್ಟಂಬರ್ 2021 (17:04 IST)
ಮ್ಯಾಟ್ರೋಮೋನಿಯೊದಲ್ಲಿ ಮಧ್ಯ ವಯಸ್ಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ನಿನ್ನನ್ನೇ‌ ಮದ್ವೆಯಾಗ್ತೀನಿ ನಂಬಿಸಿ ಒಬ್ಬರಲ್ಲ, ಇಬ್ಬರಲ್ಲ 35 ಮಹಿ
ಳೆಯರಿಗೆ ಸುಮಾರು 70 ಲಕ್ಷ ರೂ.ಗೂ ಅಧಿಕ ವಂಚನೆ ಮಾಡಿದ ಮನ್ಮಥನೊಬ್ಬ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಕಲರ್ ಕಲರ್ ಡ್ರೆಸ್ ನಲ್ಲಿ ಕಲರ್ಪುಲ್ ಆಗಿ ಸೆಲ್ಫಿಗೆ ಫೊಸ್ ಕೊಡ್ತಿರೋ ಈ ಮ್ಯಾಟ್ರಿಮೋನಿಯಲ್ ಮನ್ಮಥನ ಹೆಸ್ರು ಜಗನ್ನಾಥ್ ಸಜ್ಜನ್. ಹೆಸ್ರಿಗೇನೋ ಜಗನ್ನಾಥ ಆದ್ರೆ ಹುಡ್ಗೀರಿಗೆ ಅಜಯ್ ವಿಜಯ್ ಶ್ಯಾಮ್ ರವಿ ಸುಂದರ್ ಹೀಗೆ ಒಂದೊಂದು ಯುವತಿಗೆ ಒಂದೊಂದು ಹೆಸರಲ್ಲಿ ಪರಿಚಯ ಮಾಡ್ಕೊಳ್ತಿದ್ದ. ಮೂಲತಃ ಬಿಜಾಪುರದವನಾದ ಜಗನ್ನಾಥ ಎಂಟು ವರ್ಷಗಳ ಹಿಂದೆ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದ. ಕಳೆದ ಎರಡು ವರ್ಷಗಳ ಹಿಂದೆ ಮ್ಯಾಟ್ರಿಮೋನಿಯಲ್ ಶಾದಿ ಡಾಟ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡ್ತಿದ್ದ. ಹತ್ತಾರು ಹೆಸರಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದೋನು 90 ಕ್ಕೂ ಹೆಚ್ಚು ಯುವತಿಯರನ್ನ ಕಾಂಟಾಕ್ಟ್ ಮಾಡಿದ್ದ. ಈ ಪೈಕಿ 35 ಕ್ಕೂ ಹೆಚ್ಚು ಯುವತಿಯರಿಗೆ ಮದುವೆಯಾಗೋದಾಗಿ ನಂಬಿಸಿ ಹಣ ಒಡವೆ ಪೀಕಿ ವಂಚಿಸಿದ್ದ.
ಒಂದು ಯುವತಿಯನ್ನ ಪರಿಚಯ ಮಾಡಿಕೊಳ್ಳಲು ಜಗನಾಥ ಒಂದು ಸಿಮ್ ಬಳಸ್ತಿದ್ದ. ಹೀಗೆ ನಕಲಿ ದಾಖಲೆ ವಿಳಾಸ ಕೊಟ್ಟು ಸುಮಾರು 20ಕ್ಕೂ ಹೆಚ್ಚು ನಕಲಿ ಸಿಮ್ ಖರೀದಿಸಿದ್ದ. ಕೊಡಗು, ಚಿಕ್ಕಮಗಳೂರು, ದಾವಣಗೆರೆ, ಬೆಂಗಳೂರು, ಶಿವಮೊಗ್ಗ, ಮಂಗಳೂರಿನ ಸುಮಾರು 35 ಯುವತಿಯರಿಗೆ ಮದುವೆಯಾಗೋದಾಗಿ ನಂಬಿಸಿ ಟ್ರಿಪ್ ಮಾಡಿದ್ದ. 35 ವರ್ಷ ಮೇಲ್ಪಟ್ಟ ಹಾಗೂ ವಿಚ್ಚೇದಿತ ಯುವತಿಯರನ್ನೇ ಟಾರ್ಗೆಟ್ ಮಾಡಿ ಬಲೆಗೆ ಬೀಳಿಸ್ತಿದ್ದ. ಯುವತಿಯರು ಎಷ್ಟೇ ಸಲುಗೆಯಿಂದ ನಡೆದುಕೊಂಡರೂ ಯುವತಿಯರನ್ನ ಜಗನ್ನಾಥ್ ಟಚ್ ಕೂಡ ಮಾಡ್ತಿರಲಿಲ್ವಂತೆ. ನೀನೆ ನನಗೆ ತಾಯಿ ನೀನೇ ನನಗೆ ಮಗಳಿದ್ದಂತೆ. ಆದಷ್ಟು ಬೇಗ ಮದುವೆ ಆಗೋಣ ಅಂತ ನಂಬಿಸ್ತಿದ್ದ. ಒಂದೆರಡು ದಿನಗಳ ಟ್ರಿಪ್ ಮುಗಿಸಿದ ನಂತ್ರ ಆಕ್ಸಿಡೆಂಟ್ ಆಗಿದೆ. ಮದುವೆಗೂ ಮುಂಚೆ ಮನೆ ಕಟ್ಟುತ್ತಿದ್ದೇನೆ. ಅಂತೆಲ್ಲ ಕಥೆ ಕಟ್ಟಿ ಲಕ್ಷಗಟ್ಟಲೇ ಹಣ ಕೀಳ್ತಿದ್ದ. ಹಣ ಕೊಡ್ತಿದ್ದಂತೆ ಹುಡ್ಗಿ ನಂಬರ್ ಬ್ಲಾಕ್ ಮಾಡಿ ಸಿಮ್ ಕಾರ್ಡ್ ಡೆಸ್ಟ್ರಾಯ್ ಮಾಡ್ತಿದ್ದ.
ನಗರದಲ್ಲಿ ಉಳ್ಳಾಲದಲ್ಲಿ ಬಾಡಿಗೆ ಮನೆ ಮಾಡ್ಕೊಂಡಿದ್ದ ಜಗನ್ನಾಥ್ ವಾರಕ್ಕೊಮ್ಮೆ ಮಾತ್ರ ಮನೆಯಲ್ಲಿ ಇರ್ತಿದ್ದ. ವಾರದ ಆರು ದಿನ ಯುವತಿಯರ ಜೊತೆ ಡೇಟಿಂಗ್ ಮಾಡ್ತಿದ್ದ. ಆರೋಪಿ ಕಳೆದ ವರ್ಷ ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ಇದೇ ರೀತಿ ವಂಚಿಸಿ ಅರೆಸ್ಟ್ ಆಗಿದ್ದ. ಜೈಲಿನಿಂದ ಹೊರಬಂದ ನಂತರ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿ ಕಳೆದ ಎರಡು ತಿಂಗಳಲ್ಲೆ 15 ಕ್ಕೂ ಹೆಚ್ಚು ಯುವತಿಯರಿಗೆ ವಂಚಿಸಿದ್ದಾನೆ. ಸುಮಾರು 35 ಯುವತಿಯರಿಂದ 70 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿರೋದು ತನಿಖೆ ವೇಳೆ ಹೊರಬಿದ್ದಿದೆ. ಆರೋಪಿಯಿಂದ ಇನ್ನಷ್ಟು ಯುವತಿಯರು ವಂಚನೆಗೆ ಒಳಗಾಗಿರೋ ಸಾಧ್ಯತೆಗಳಿದೆ ಮೋಸ ಹೋದವರು ಕೂಡಲೇ ಬಂದು ದೂರು ನೀಡಿ ಅಂತ ಪೊಲೀಸರು ತಿಳಿಸಿದ್ದಾರೆ. 35 ಕ್ಕೂ ಅಧಿಕ ಮಂದಿಗೆ ವಂಚಿಸಿರೋದಾಗಿ ಆರೋಪಿಯೇ ಬಾಯ್ಬಿಟ್ಟಿದ್ರು ಈತನ ವಿರುದ್ದ ಕೇವಲ 3 ಜನ ಯುವತಿಯರು ಮಾತ್ರ ದೂರು ನೀಡಿದ್ದಾರೆ. ಆರೋಪಿಯನ್ನ ಬಂಧಿಸಿರುವ ಹೆಣ್ಣೂರು ಪೊಲೀಸರು ಆರೋಪಿಯನ್ನ ಜೈಲಿಗಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ