ಅಕ್ರಮ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನೆರೆಮನೆಯಾತನನ್ನು ಕೊಂದ ವ್ಯಕ್ತಿ
ಮಂಗಳವಾರ, 16 ಫೆಬ್ರವರಿ 2021 (10:41 IST)
ಮಂಗಳೂರು : ವಿವಾಹಿತ ನೆರೆಮನೆಯಾತನ ಅಕ್ರಮ ಸಂಬಂಧಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ 43 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಮದುವೆಯಾಗಿ ಮಗುವಿದ್ದ ಮಹಿಳೆಯ ಜೊತೆ ಸಂಬಂಧವಿಟ್ಟುಕೊಂಡಿದ್ದ. ಹೀಗಾಗಿ ಆರೋಪಿ ಆಗಾಗ ಅವಳ ಮನೆಗೆ ಬರುತ್ತಿದ್ದ. ಇದಕ್ಕೆ ನೆರೆಮನೆಯ ಸಂತ್ರಸ್ತ ಆಕ್ಷೇಪ ವ್ಯಕ್ತಪಡಿಸಿದ. ಇದರಿಂದ ಕೋಪಗೊಂಡ ಆರೋಪಿ ತನ್ನ ಸ್ನೇಹಿತರ ಜೊತೆ ಸೇರಿ ಸಂತ್ರಸ್ತನನ್ನು ಕೊಲೆ ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.