ಪಾರಿವಾಳ ಹಿಡಿಯಲು ಹೋಗಿ ಮಹಡಿಯಿಂದ ಬಿದ್ದು ಯುವಕ ಸಾವು

ಮಂಗಳವಾರ, 10 ಆಗಸ್ಟ್ 2021 (21:28 IST)
ಬೆಂಗಳೂರು: ಪಾರಿವಾಳ ಹಿಡಿಯಲು ಹೋಗಿ ಕಟ್ಟಡದಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
 
ಭೂಪಸಂದ್ರದ ನಿವಾಸಿ ಉಮರ್ ಫಾರೂಕ್ (19) ಮೃ
ತಪಟ್ಟ ಯುವಕ.
 
ಮೃತ ಉಮರ್ ಫಾರೂಕ್, ಸೋಮವಾರ ಸಂಜೆ ಪಾರಿವಾಳ ಹಿಡಿಯಲು ಹೋಗಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದರು.
 
ಪಾರಿವಾಳ ಹಿಡಿಯುವುದನ್ನು ಹವ್ಯಾಸ ಮಾಡಿಕೊಂಡಿದ್ದ ಮೃತ ಉಮರ್, ಹಲವು ಕಟ್ಟಡಗಳನ್ನು ಏರಿ ಪಾರಿವಾಳ ಹಿಡಿದು ತರುತ್ತಿದ್ದರು. ಇಂದು ಸಂಜೆಯೂ ನಾಲ್ಕು ಅಂತಸ್ತಿನ ಕಟ್ಟಡ ಏರಿ‌ ಮಹಡಿಯಲ್ಲಿ ನಿಂತು ಪಾರಿವಾಳ ಹಿಡಿಯುತ್ತಿದ್ದರು. ಅದೇ ಸಂದರ್ಭದಲ್ಲೇ ಆಯತಪ್ಪಿ ಮಹಡಿಯಿಂದ ಬಿದ್ದಿದ್ದರು. ಈ ವೇಳೆ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
 
ಈ ಸಂಬಂಧ ಸಂಜಯನಗರ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ