ಬಾರ್ ಎದುರು ನೀರಿಗಾಗಿ ಜಗಳ: ಕ್ಯಾಶಿಯರ್ ಕೊಲೆ

ಗುರುವಾರ, 17 ಮಾರ್ಚ್ 2022 (09:40 IST)
ಕೋಲಾರ: ಮದ್ಯದ ಅಮಲಿನಲ್ಲಿ ಇಬ್ಬರು ವ್ಯಕ್ತಿಗಳು ನೀರಿಗಾಗಿ ಜಗಳವಾಡಿದ್ದು, ಕ್ಯಾಶಿಯರ್ ಕೊಲೆಯಲ್ಲಿ ಅಂತ್ಯವಾಗಿದೆ.

ಬಾರ್ ನಲ್ಲಿ ನೀರಿನ ಪ್ಯಾಕೆಟ್ ಗಾಗಿ ಇಬ್ಬರು ಜಗಳವಾಡಿದ್ದರು. ಈ ಜಗಳದಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ 42 ವರ್ಷದ ವ್ಯಕ್ತಿಗೆ ಇಬ್ಬರೂ ಚಾಕುವಿನಿಂದ ಇರಿದಿದ್ದಾರೆ. ಪರಿಣಾಮ ಆತ ಸಾವನ್ನಪ್ಪಿದ್ದಾನೆ.

ಈ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪೊಲೀಸರು ಇದೀಗ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ