ಕಾಂಡೂಮ್`ಗಾಗಿ ಸರ್ಕಾರಿ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದ ಯುವಕ..!

ಗುರುವಾರ, 13 ಜುಲೈ 2017 (19:27 IST)
ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ಪ್ರತಿಭಟನೆ ನಡೆಸುವುದನ್ನ ನೋಡಿರುತ್ತೀರಿ. ಆದರೆ, ತುಮಕೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ಕಾಂಡೂಮ್ ಖಾಲಿಯಾಗಿದೆ ಎಂದು ಗಲಾಟೆ ಮಾಡಿರುವ ಘಟನೆ ನಡೆದಿದೆ.
 

ಚಿಕ್ಕಮಗಳೂರು ಮೂಲದ ಗಣೇಶ್ ಎಂಬಾತ ಪತ್ನಿ ಮನೆಗೆ ತಿಪಟೂರಿಗೆ ಬಂದಿದ್ದ. ಪತ್ನಿಯನ್ನ ಭೇಟಿಮಾಡುವುದಕ್ಕೂ ಮುನ್ನ ಕಾಂಡೂಮ್ ಪಡೆಯಲು ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾನೆ. ಆದರೆ, ಅಲ್ಲಿ ಕಾಂಡೂಮ್ ಖಾಲಿಯಾಗಿದ್ದರಿಂದ ಸಿಬ್ಬಂದಿ ಜೊತೆ ಜಗಳ ತೆಗೆದಿದ್ದಾನೆ. ಯಾರೋ ಕಿಡಿಗೇಡಿ ಕಾಂಡೂಮ್`ಗಳನ್ನ ಕದ್ದೊಯ್ದಿದ್ದಾನೆ ಎಂದು ಹೇಳಿದರೂ ಮಾತು ಕೇಳಿಲ್ಲ. ಬಳಿಕ ಆಸ್ಪತ್ರೆ ಮುಂದೆ ಪ್ರತಿಭಟನೆಗೆ ಕುಳಿತಿದ್ದಾನೆ. ಬಳಿಕ ವೈದ್ಯರೇ ಹಣ ನೀಡಿ ಪಕ್ಕದ ಮೆಡಿಕಲ್ ಸಾಪ್`ನಲ್ಲಿ ಕಾಂಡೂಮ್ ಖರೀದಿಸಿ ಉಚಿತವಾಗಿ ಕೊಟ್ಟು ಕಳುಹಿಸಿದ್ದಾರೆ.

ನಿವ್ಯಾಕೆ ಅಷ್ಟು ಹಠ ಮಾಡಿದ್ರಿ ಎಂದು ಕೇಳಿದ್ದಕ್ಕೆ, ಎಚ್`ಐವಿ ಮತ್ತು ಇತರೆ ಲೈಂಗಿಕ ರೋಗಗಳು ವೇಗವಾಗಿ ಹರಡುತ್ತವೆ. ಹೀಗಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವಾಗಲೂ ಕಾಂಡೂಮ್ ವಿತರಣೆಯಾಗಬೇಕು. ನಾನು ಒಂದೊಳ್ಳೆ ಉದ್ದೇಶದಿಂದ ೀ ಪ್ರತಿಭಟನೆ ನಡೆಸಿದೆ ಎಂದಿದ್ದಾರೆ.

ಮಾಹಿತಿ: ಟೈಮ್ಸ್ ಆಫ್ ಇಂಡಿಯಾ

ವೆಬ್ದುನಿಯಾವನ್ನು ಓದಿ