ಏಕಾಏಕಿ ಹರಿದ ನೀರಿಗೆ ಬೆಚ್ಚಿ ಬಿದ್ದ ಮಂಡ್ಯ

ಬುಧವಾರ, 16 ಅಕ್ಟೋಬರ್ 2019 (19:49 IST)
ಏಕಾಏಕಿಯಾಗಿ ನಡೆದ ಘಟನೆಯಿಂದಾಗಿ ಅಲ್ಲಿನ ರೈತರು ಬೆಚ್ಚಿಬಿದ್ದಿದ್ದಾರೆ.

ಸಿಂದಘಟ್ಟ ಗ್ರಾಮದ ಕೆರೆಯ ಕೋಡಿ ಒಡೆದು ಜಮೀನಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ನೂರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಭತ್ತ, ಬಾಳೆ ಮತ್ತು ಕಬ್ಬಿನ ಬೆಳೆ ನಾಶವಾಗಿದೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ ನೀಡಿದ್ದು, ಪರಿಹಾರ ನೀಡಲು ನೊಂದ ರೈತರ ಆಗ್ರಹ ಮಾಡಿದ್ದಾರೆ.

ಮಂಡ್ಯದ ಸಿಂದಘಟ್ಟ ಗ್ರಾಮದ ಕೆರೆಯ ಕೋಡಿಯಲ್ಲಿ ಬಿರುಕು ಬಿಟ್ಟು ನೂರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಭತ್ತ ಮತ್ತು ಬಾಳೆ ಬೆಳೆ ನಾಶವಾಗಿದೆ.

ಸುರಿದ ಭಾರೀ ಮಳೆಯ ನೀರು ಹಾಗೂ ಹೇಮಾವತಿ ನಾಲೆಯ ನೀರು ಕೆರೆಯಲ್ಲಿ ಸೇರಿದ ಪರಿಣಾಮವಾಗಿ ಕೆರೆಯ ಕೋಡಿಯು ನೀರಿನ ರಭಸಕ್ಕೆ ಒಡೆದಿದೆ. ನೂರಾರು ಎಕರೆ ಕೃಷಿ ಭೂಮಿಗೆ ನೀರು ನುಗ್ಗಿದ್ದು, ಲಕ್ಷಾಂತರ ರೂಪಾಯಿ ಬೆಳೆ ನಷ್ಟ ಸಂಭವಿಸಿದೆ. 


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ