ಹೇಮಾವತಿ ನದಿಯಲ್ಲಿ ಮತ್ತೆ ಭಾರೀ ಪ್ರವಾಹ

ಸೋಮವಾರ, 19 ಆಗಸ್ಟ್ 2019 (20:16 IST)
ಹೇಮಾವತಿ ನದಿಯಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು ಜನರನ್ನು ಮತ್ತಷ್ಟು ಹೈರಾಣಾಗಿಸಿದೆ.

ಗೊರೂರು ಜಲಾಶಯದಿಂದ 30ಸಾವಿರ ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗಿದೆ. ಹೀಗಾಗಿ ಪ್ರವಾಹದ ಭೀತಿಯಲ್ಲಿ ಜನರು ಇದ್ದಾರೆ.

ಮಂಡ್ಯದ ಹೇಮಾವತಿ ನದಿಯ ನೀರಿಗೆ ಇಳಿಯದಂತೆ ತಾಲ್ಲೂಕು ಆಡಳಿತ ಮನವಿ ಮಾಡಿಕೊಂಡಿದೆ.
ಮಂಡ್ಯ ಕೃಷ್ಣರಾಜಪೇಟೆ  ಹೇಮಾವತಿ ನದಿಯಲ್ಲಿ ಮತ್ತೆ ಒಳಹರಿವು ಹೆಚ್ಚಾಗಿದೆ.

ಗೊರೂರು ಜಲಾಶಯದಿಂದ 30ಸಾವಿರ ಕ್ಯೂಸೆಕ್ಸ್ ಗೂ ಅಧಿಕ ಪ್ರಮಾಣದಲ್ಲಿ ನೀರನ್ನು ಹರಿಯಬಿಟ್ಟಿರುವುದರಿಂದ ಹೇಮಾವತಿ ನದಿಯಲ್ಲಿ ಪ್ರವಾಹ ಪರಿಸ್ಥಿತಿಯು ನಿರ್ಮಾಣವಾಗಿದೆ.

ನದಿಯ ಪಾತ್ರ ಹಾಗೂ ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದ ಇರಬೇಕು. ಬಟ್ಟೆ ತೊಳೆಯಲು, ಜಾನುವಾರುಗಳನ್ನು ತೊಳೆಯಲು ನೀರಿಗೆ ಇಳಿಯಬಾರದು. ಹೀಗಂತ ತಹಶೀಲ್ದಾರ್ ಎಂ. ಶಿವಮೂರ್ತಿ ಮತ್ತು ಸರ್ಕಲ್ ಇನ್ಸ್ ಪೆಕ್ಟರ್ ಕೆ.ಎನ್.ಸುಧಾಕರ್ ಜನರಲ್ಲಿ ಕೋರಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ