ಮಂಗಳೂರ ಪುಟ್ಟ ಪ್ರತಿಭೆ ಈಗ ಲಿಟಲ್ ಮಿಸ್ ಏಷ್ಯಾ-2017

ಶನಿವಾರ, 20 ಮೇ 2017 (13:44 IST)
ಕುಂದಾಪುರ ಮೂಲದ ಗೋಪಾಡಿಯ ಲಿಪಿಕಾ ಶೆಟ್ಟಿ ಎಂಬ ನಾಲ್ಕನೇ ತರಗತಿ ಓದುತ್ತಿರುವ ಬಾಲಕಿ ಅಂತರಾಷ್ಟ್ರೀಯ ಅಂಗಳದಲ್ಲಿ ಭಾರತದ ಛಾಪು ಮೂಡಿಸಿದ್ದಾಳೆ. ಟರ್ಕಿಯ ಅಂತಾಲಿಯಾದಲ್ಲಿ ನಡೆದ ಫೆಸ್ಟಿವಲ್ ಮೋಡೆಲ್ ಆಂಡ್ ಟ್ಯಾಲೆಂಟ್ ವಿಶ್ವಮಟ್ಟದ ಸ್ಪರ್ಧೆಯಲ್ಲಿ ಲಿಪಿಕಾ ಲಿಟಲ್ ಮಿಸ್ ಏಷ್ಯಾ-2017 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ.
 
ಲಿಪಿಕಾ ಶೆಟ್ಟಿ 20 ರಾಷ್ಟ್ರಗಳ ಸ್ಪರ್ಧಿಗಳ ಜತೆಯಲ್ಲಿ ಪೈಪೋಟಿ ನಡೆಸಿ ಪ್ರಶಸ್ತಿ ಗೆದ್ದುಕೊಂಡಿದ್ದಾಳೆ. ಮುಂಬೈ ಅಂಧೇರಿಯ ಪಶ್ಚಿಮದಲ್ಲಿ ವಾಸವಾಗಿರುವ ಉದ್ಯಮಿ ವಿಠಲ ಶೆಟ್ಟಿ ಹಾಗೂ ಸಾಂಚಿ ಶೆಟ್ಟಿ ದಂಪತಿಗಳ ಪುತ್ರಿ ಲಿಪಿಕಾ ಅಂತರಾಷ್ಟ್ರೀಯ ವೇದಿಕೆಯಲ್ಲಿ ಈ ಸ್ಪರ್ಧೆಯನ್ನು ಗೆಲ್ಲುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾಳೆ.
 
ಭಾರತದ ವೈಶಿಷ್ಟ, ಉಡುಗೆ-ತೊಡುಗೆ ಈ ಸ್ಪರ್ಧೆಯ ಮುಖ್ಯ ವಿಚಾರವಾಗಿದ್ದು, ಕ್ಯಾಟ್ ವಾಕ್ , ಸಾಮಾನ್ಯ ಜ್ನಾನದ ಕುರಿತು ನಿರ್ಣಾಯಕರು ಕೇಳುವ ಪ್ರಶ್ನೆಗಳಿಗೆ ಜಾಣ್ಮೆಯ ಉತ್ತರ ನೀಡಿ ಲಿಪಿಕಾ ಜಯಶಾಲಿಯಾಗಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ