Mangaluru Suhas Shetty: ಮಂಗಳೂರು ಸುಹಾಸ್ ಶೆಟ್ಟಿ ನಡುರಸ್ತೆಯಲ್ಲೇ ಹತ್ಯೆ ಮಾಡುವ ಭೀಕರ ವಿಡಿಯೋ ಇಲ್ಲಿದೆ ನೋಡಿ
ಕಡಲನಗರಿ ಮಂಗಳೂರಿನಲ್ಲಿ ನಡುರಸ್ತೆಯಲ್ಲೇ ದುಷ್ಕರ್ಮಿಗಳ ಗುಂಪು ಬಜರಂಗ ದಳ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿವೆ. ಹತ್ಯೆ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.
ರಾತ್ರಿ ಜನನಿಬಿಡ ರಸ್ತೆಯಲ್ಲೇ ಘಟನೆ ನಡೆದಿದೆ. ಏಳೆಂಟು ಮಂದಿಯ ಗುಂಪು ಸುಹಾಸ್ ಶೆಟ್ಟಿಯ ಜೊತೆ ಮೊದಲು ವಾಗ್ವಾದ ನಡೆಸುತ್ತವೆ. ಬಳಿಕ ಚಾಕಿವಿನಿಂದ ಇರಿದು ಕೆಳಕ್ಕೆ ಕೆಡವಿ ಮತ್ತಷ್ಟು ಇರಿದು ಹತ್ಯೆ ಮಾಡುವ ದೃಶ್ಯ ವಿಡಿಯೋದಲ್ಲಿದೆ.
ಎರಡು ವರ್ಷಗಳ ಹಿಂದೆ ಕೊಲೆಗೀಡಾಗಿದ್ದ ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರತೀಕಾರವಾಗಿ ಫಾಜಿಲ್ ಎಂಬಾತನನ್ನು ಹತ್ಯೆ ಮಾಡಲಾಗಿತ್ತು. ಆ ಪ್ರಕರಣದಲ್ಲಿ ಆರು ಆರೋಪಿಗಳ ಪೈಕಿ ಇದೇ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ. ಆ ಹತ್ಯೆಗೆ ಪ್ರತೀಕಾರವಾಗಿ ಸುಹಾಸ್ ನನ್ನು ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ.