ಕರಾಳ ದಿನಾಚರಣೆಯ ವೇಳೆ ಬಂದೂಕು ಹಿಡಿದ ಆರೋಪಿ ರತ್ನಪ್ರಸಾದ್ ಬಂಧನ

ಗುರುವಾರ, 3 ನವೆಂಬರ್ 2016 (15:39 IST)
ಕರಾಳ ದಿನಾಚರಣೆಯ ವೇಳೆ ಬಂದೂಕು ಹಿಡಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯ ರತ್ನಪ್ರಸಾದ್ ಪವಾರ್‌ನನ್ನು ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
 
ಕರ್ನಾಟಕ ರಾಜ್ಯೋತ್ಸವ ದಿನಂದು ಎಂಇಎಸ್ ಕರಾಳ ದಿನಾಚರಣೆ ಆಚರಿಸಿದ ಸಂದರ್ಭದಲ್ಲಿ ಡಕಾಯಿತನಂತೆ ವೇಷ ಧರಿಸಿ ಕುದುರೆಯ ಮೇಲೆ ಕುಳಿತ ಬಂದೂಕು ತೋರಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
 
ನಗರದ ಚಾವಟಿಗಲ್ಲಿ ನಿವಾಸಿಯಾದ ಪವಾರ್ ವಿರುದ್ಧ ಸ್ವಯಂ ಪ್ರೇರಿತವಾಗಿ  ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
 
ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿ ಪವಾರ್‌ನನ್ನು ಪೊಲೀಸರು ಇಂದು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ