ಮುಸಲ್ಮಾನರ ಪವಿತ್ರ ಹಬ್ಬ. ಒಂದು ತಿಂಗಳ ಕಾಲ ಉಪವಾಸ ಮಾಡಿ, ಆಚರಿಸೋ ಈ ಹಬ್ಬ, ತ್ಯಾಗ, ಬಲಿದಾನದ ಸಂಕೇತ. ಇಂದು ನಾಡಿನೆಲ್ಲೆಡೆ ಮುಸಲ್ಮಾನ ಭಾಂದವರು ರಂಜಾನ್ ಹಬ್ಬ ಆಚರಿಸಿ ಸಂಭ್ರಮಿಸಿದ್ರು. ಒಂದೆಡೆ ಬಿಳಿ ಬಣ್ಣದ ಬಟ್ಟೆ ಧರಿಸಿ ಸಾಲಾಗಿ ಕುಳಿತ ಜನರು, ಮತ್ತೊಂದೆಡೆ ಹಬ್ಬದ ಖುಷಿಯಲ್ಲಿ ಹೊಸ ಬಟ್ಟೆಗಳನ್ನ ಧರಿಸಿ ಅಪ್ಪನ ತೋಳುಗಳಲ್ಲಿ ನಗುತ್ತಾ ನಮಾಜ್ಗೆ ಆಗಮಿಸಿದ್ದ ಪುಟಾಣಿ ಮಕ್ಕಳು, ಚಾಮರಾಜಪೇಟೆ ಮೈದಾನದಲ್ಲಿ ನಡೆದ ರಂಜಾನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಕಂಡುಬಂದ ದೃಶ್ಯಗಳಿವು.ಕಳೆದ ಒಂದು ತಿಂಗಳಿನಿಂದ ರೋಜ ಅಂದ್ರೆ ಉಪವಾಸ ಮಾಡಿದ್ದ ಮುಸಲ್ಮಾನರು, ಇಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸೋ ಮೂಲಕ ರಂಜಾನ್ ಆಚರಿಸಿದ್ರು.ಚಾಮರಾಜಪೇಟೆ ಮೈದಾನದಲ್ಲಿ ಸೇರಿದ ಸಾವಿರಾರು ಜನರು ಅಲ್ಲಾನ ಪ್ರಾರ್ಥಿಸೋ ಮೂಲಕ ಹಬ್ಬ ಆಚರಿಸಿದ್ರು.
ಇನ್ನು ವಾಸ್ತವವಾಗಿ ಅರಬ್ ದೇಶಗಳಲ್ಲಿ ರಂಜಾನ್ ಹಬ್ಬದ ಆಚರಣೆಯ ಮೊದಲು ಚಂದ್ರ ಗೋಚರಿಸುತ್ತದೆ. ಅರಬ್ ದೇಶಗಳಲ್ಲಿ ಈದ್ ಆಚರಿಸಿದ ಒಂದು ದಿನದ ನಂತರ ಭಾರತದಲ್ಲಿ ರಂಜಾನ್ಆಚರಿಸಲಾಗುತ್ತದೆ.ರಂಜಾನ್ ದಿನದಂದು ಇಸ್ಲಾಂ ಧರ್ಮವನ್ನ ನಂಬುವ ಎಲ್ಲಾ ಜನರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸ್ತಾರೆ.ಅದರಂತೆ ಇಂದು ಪ್ರಾರ್ಥನೆ ಸಲ್ಲಿಸಿದ ಧರ್ಮಗುರುಗಳು, ನಾಡಿನ ಜನರೆಲ್ಲರೂ ಒಂದೇ, ಹಿಂದೂ-ಮುಸ್ಲಿಂ ಬೇಧ-ಬಾವ ಇಲ್ಲದೇ ಎಲ್ಲರೂ ಒಗ್ಗಟ್ಟಾಗಿರಬೇಕು ಅಂತಾ ಸಂದೇಶ ನೀಡಿದ್ರು.