ಶ್ರೀಲಂಕಾದಲ್ಲಿ ಮಂತ್ರಿಗಳ ಸಾಮೂಹಿಕ ರಾಜೀನಾಮೆ

ಮಂಗಳವಾರ, 5 ಏಪ್ರಿಲ್ 2022 (20:37 IST)
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಿಯಂತ್ರಣದ ಸಾಧ್ಯತೆಗಳು ಕಡಿಮೆಯಾಗುತ್ತಿದ್ದು, ಪರಿಸ್ಥಿತಿ ಈಗಾಗಲೇ ಕೈಮೀರಿದೆ. ಸಚಿವ ಸಂಪುಟದಲ್ಲಿದ್ದ ಎಲ್ಲ 26 ಸಚಿವರೂ ಒಮ್ಮೆಲೆ ರಾಜೀನಾಮೆ ಕೊಟ್ಟಿದ್ದು ರಾಜಕೀಯ ಬಿಕ್ಕಟ್ಟೂ ಸೃಷ್ಟಿಯಾಗಿದೆ . ರಾಜೀನಾಮೆ ನೀಡಿರುವವರಲ್ಲಿ ಶ್ರೀಲಂಕಾ ಪ್ರಧಾನಿಯ ಪುತ್ರ ನಮಲ್ ರಾಜಪಕ್ಸ ಸಹ ಸೇರಿದ್ದಾರೆ. ಜನರು ದಿನದಿಂದ ದಿನಕ್ಕೆ ಸಹನೆ ಕಳೆದುಕೊಳ್ಳುತ್ತಿದ್ದಾರೆ. ರಾಜೀನಾಮೆಗಳನ್ನು ಪ್ರಧಾನಿ ಅಂಗೀಕರಿಸುತ್ತಾರೆಯೇ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಅಧ್ಯಕ್ಷ ಗೊಟಬಾಯ ರಾಜಪಕ್ಸ ಮನೆ ಎದುರು ಪ್ರತಿಭಟನೆ ನಡೆದ ನಂತರ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಲಾಗಿದೆ. ದೇಶವ್ಯಾಪಿ 36 ಗಂಟೆಗಳ ಕರ್ಫ್ಯೂ ವಿಧಿಸಲಾಗಿದೆ. ಇದೀಗ ಸಚಿವ ಸಂಪುಟದ ಎಲ್ಲ ಮಂತ್ರಿಗಳೂ ಸಾಮೂಹಿಕ ರಾಜೀನಾಮೆ ನೀಡಿರುವುದರಿಂದ ಹೊಸದಾಗಿ ಮಂತ್ರಿಮಂಡಲ ರಚಿಸಲು ಪ್ರಧಾನಿಗೆ ಅವಕಾಶ ಸಿಕ್ಕಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ