ಕೊಲಂಬೊ : ಹಣದುಬ್ಬರದಿಂದಾಗಿ ಶ್ರೀಲಂಕಾದಲ್ಲಿ ಸರಕುಗಳ ಬೆಲೆಗಳನ್ನು ಗಗನಕ್ಕೇರಿದೆ.
ಜನರು ಇಂಧನ, ಆಹಾರ ಮತ್ತು ಔಷಧಿಗಳನ್ನು ಖರೀದಿಸಲು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಶ್ರೀಲಂಕಾದಲ್ಲಿ ತರಕಾರಿಗಳ ಬೆಲೆಗಳು ದ್ವಿಗುಣಗೊಂಡಿವೆ. ಆದರೆ ಅಕ್ಕಿ ಮತ್ತು ಗೋಧಿಯಂತಹ ಪ್ರಮುಖ ಪದಾರ್ಥಗಳು ಕ್ರಮವಾಗಿ ಕೆಜಿಗೆ 220 ರೂ. ಮತ್ತು ಕೆಜಿಗೆ 190 ರೂ.ಗೆ ಮಾರಾಟವಾಗುತ್ತಿವೆ.
ಒಂದು ಕೆಜಿ ಸಕ್ಕರೆ ಬೆಲೆ 240 ರೂ. ಆಗಿದ್ದು 1 ಲೀಟರ್ ತೆಂಗಿನ ಎಣ್ಣೆ 850 ರೂ. ಆಗಿದೆ. ಒಂದು ಮೊಟ್ಟೆಯ ಬೆಲೆ 30 ಹಾಗೂ 1 ಕೆಜಿ ಹಾಲಿನ ಪುಡಿಯ ಪ್ಯಾಕ್ ಈಗ 1,900 ರೂ.ಗೆ ಮಾರಾಟವಾಗುತ್ತದೆ.
ಫೆಬ್ರವರಿಯಲ್ಲಿಯೇ ಶ್ರೀಲಂಕಾದ ಚಿಲ್ಲರೆ ಹಣದುಬ್ಬರವು ಶೇಕಡಾ 17.5 ಕ್ಕೆ ತಲುಪಿದೆ ಮತ್ತು ಆಹಾರ ಹಣದುಬ್ಬರವು ಶೇಕಡಾ 25 ಕ್ಕಿಂತ ಹೆಚ್ಚಿದೆ. ಇದು ಆಹಾರ ಮತ್ತು ಧಾನ್ಯಗಳ ಬೆಲೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಔಷಧಿಗಳು ಮತ್ತು ಹಾಲಿನ ಪುಡಿಯ ದೊಡ್ಡ ಕೊರತೆಯೂ ಇದೆ.